ಕಾಸರಗೋಡು: ಕೂಡ್ಲು ಪಾಯಿಚ್ಚಾಲ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಹಂದಿಸಾಕಣೆ ಕೇಂದ್ರವೊಂದರ ಮಾಲಿನ್ಯ ಹೊಂಡಕ್ಕೆ ಬಿದ್ದು, ಕೇಂದ್ರದ ಕಾರ್ಮಿಕ, ನೇಪಾಳ ನಿವಾಸಿ ಮಹೇಶ್ ರಾಯ್(19)ಮೃತಪಟ್ಟಿದ್ದಾನೆ. ಖಾಸಗಿ ವ್ಯಕ್ತಿಯೊಬ್ಬರ ಮಾಲಿಕತ್ವದಲ್ಲಿರುವ ಹಂದಿ ಸಾಕಣೆ ಕೇಂದ್ರದ ತ್ಯಾಜ್ಯದ ಹೊಂಡಕ್ಕೆ ಮಹೇಶ್‍ರಾಯ್ ಆಯತಪ್ಪಿ ಬಿದ್ದಿದ್ದು, ತಕ್ಷಣ ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿನೀಡಿ, ಹೊಂಡಕ್ಕೆ ಬಿದ್ದಿದ್ದ ಮಹೇಶ್‍ರಾಯ್‍ನನ್ನು ಮೇಲಕ್ಕೆತ್ತಲು ಯತ್ನಿಸಿದ್ದರೂ, ಸಾಧ್ಯವಾಗದಿದ್ದಾಗ ಜೆಸಿಬಿ ಬಳಸಿ ಮೇಲಕ್ಕೆತ್ತಿ, ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನಗರಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.