ಆಲಪ್ಪುಳ: ಕಲ್ಲರ್‌ಕೋಟ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿಗಳ ಮೃತದೇಹಗಳನ್ನು ವಂದನಂ ವೈದ್ಯಕೀಯ ಕಾಲೇಜಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿ ಬಳಿಕ ವಿಧಿವಿಧಾನಗಳು ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾಗಿ ನಡೆಯಿತು.
ಸಾವಿನಲ್ಲೂ ಜೊತೆಯಾಗಿ ಪಯಣಿಸಿದ ಗೆಳೆಯರನ್ನು ಸಹಪಾಠಿಗಳು, ಶಿಕ್ಷಕರು, ಸಿಬ್ಬಂದಿಗಳು ಬೀಳ್ಕೊಟ್ಟರು. ವಿದ್ಯಾರ್ಥಿಗಳಾದ ಇಬ್ರಾಹಿಂ, ದೇವಾನಂದ್, ಆಯುಷ್ ರಾಜ್, ಶ್ರೀದೀಪ್ ಮತ್ತು ಮೊಹಮ್ಮದ್ ಜಬ್ಬಾರ್ ಅವರ ಮೃತದೇಹಗಳನ್ನು ಸಾರ್ವಜನಿಕ ದರ್ಶನದ ನಂತರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಒಂದು ತಿಂಗಳ ಹಿಂದೆ ವಂದನಂ ಮೆಡಿಕಲ್ ಕಾಲೇಜಿಗೆ ಭಾರೀ ನಿರೀಕ್ಷೆಯೊಂದಿಗೆ ಬಂದವರು ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪೋಷಕರು ಹಾಗೂ ಆತ್ಮೀಯ ಸಹಪಾಠಿಗಳು ಸಾವಿನಿಂದ ರೋದಿಸುತ್ತ ವೈದ್ಯಕೀಯ ಕಾಲೇಜಿನಲ್ಲಿ ಜಮಾಯಿಸಿದ್ದರು.
ಸಚಿವರಾದ ವೀಣಾ ಜಾರ್ಜ್, ಸಾಜಿ ಚೆರಿಯನ್ ಸೇರಿದಂತೆ ಹಲವು ಪ್ರತಿನಿಧಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಅಂತಿಮ ನಮನ ಸಲ್ಲಿಸಿದರು.