ನವದೆಹಲಿ: ರಾಜಧಾನಿಯಲ್ಲಿ ಚಳಿಯ ಕೊರೆತ ಹಾಗೂ ಮಂಜಿನ ಮುಸುಕು ತೀವ್ರವಾಗಿದ್ದು ಬುಧವಾರ 4.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಇದು ಈ ಚಳಿಗಾಲ ಅವಧಿಯ ಅತ್ಯಂತ ಕನಿಷ್ಠ ಉಷ್ಣಾಂಶವಾಗಿದೆ.
ಸಫ್ದರ್ಜಂಗ್‌ನಲ್ಲಿ 4.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಡಿಸೆಂಬರ್ 27, 1930ರಂದು 0.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಅತ್ಯಂತ ಕನಿಷ್ಠ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯ ಗುಣಮಟ್ಟದಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡುಬಂದಿದೆ. ಮಂಗಳವಾರ ಏಕ್ಯೂಐ 223ರಷ್ಟಿತ್ತು. ಇಂದು (ಡಿ.11) 207 ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.