ಕಾಸರಗೋಡು: ಕೇರಳ ಆಗ್ರೋ ವತಿಯಿಂದ ಬ್ರ್ಯಾಂಡೆಡ್ ಉತ್ಪನ್ನಗಳ ಸಂಚಾರಿ ಮಾರಾಟ ಕೇಂದ್ರವನ್ನು ಪ್ರಾರಂಭಿಸಿದ್ದು, ಕಾಸರಗೋಡು ಸಿವಿಲ್‍ಸ್ಟೇಶನ್ ವಠಾರದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಮಧ್ಯವರ್ತಿಗಳಿಲ್ಲದೆ, ಕಲಬೆರಕೆ ರಹಿತ ಗುಣಮಟ್ಟದ ಉತ್ಪನ್ನಗಳು ಸಂಚಾರಿ ಮಾರಾಟ ಕೇಂದ್ರಗಳಲ್ಲಿ ಲಭ್ಯವಿರಲಿದ್ದು, ಕೃಷಿ ಇಲಾಖೆ ಹಾಗೂ ಕೇರಳ ಸರ್ಕಾರದ ಯೋಜನೆ ಇದಾಗಿದೆ. ಇದರಿಂದ ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಲಭ್ಯವಾಗಲಿದ್ದು, ಪ್ರತಿಯೊಬ್ಬರೂ ಕೇಂದ್ರಕ್ಕೆ ಬಂದು ಉತ್ಪನ್ನಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಧಾನ ಕೃಷಿ ಅಧಿಕಾರಿ ಪಿ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. 'ಆತ್ಮಾ' ಯೋಜನೆಯ ನಿರ್ದೇಶಕ ಎ. ಸುರೇಂದ್ರನ್, ಡಿಡಿಎ (ಎಚ್) ಕೆ.ಎನ್ ಜ್ಯೋತಿಕುಮಾರಿ, ಡಿಡಿಎ (ಡಬ್ಲ್ಯುಎಂ) ಸ್ಮಿತಾ ನಂದಿನಿ, ನೀಲೇಶ್ವರಂಎ.ಡಿ.ಎ.ಕೆ. ಬಿಂದು ಮೊದಲಾದವರು ಉಪಸ್ಥಿತರಿದ್ದರು.
ಮೊಬೈಲ್ ಮಾರಾಟ ಕೇಂದದ್ರ ಸೇವೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದೆ. ಪ್ರತಿ ತಿಂಗಳ ಎರಡನೇ ಮಂಗಳವಾರ ಕಾಸರಗೋಡು ಕಲೆಕ್ಟರೇಟ್ ಆವರಣದಲ್ಲಿ ಕೇರಳ ಗ್ರೋ ಬ್ರಾಂಡ್ ಉತ್ಪನ್ನಗಳು ಲಭ್ಯವಿರಲಿದೆ. ಜಿಲ್ಲಾ ಮಟ್ಟದ ಮಾರುಕಟ್ಟೆ ಕೇಂದ್ರವು ನೀಲೇಶ್ವರಂ ತಾಲೂಕು ಆಸ್ಪತ್ರೆ ಬಳಿ ಇರುವ ನೀಲೇಶ್ವರಂ ಬ್ಲಾಕ್ ಪಂಚಾಯತ್ ನ ಮಹಿಳಾ ಮಾರುಕಟ್ಟೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.