HEALTH TIPS

ಕಳತ್ತೂರು ಜಾರಂ ಮುಖಾಂ ಉರೂಸ್ ಇಂದಿನಿಂದ

ಕುಂಬಳೆ: ಕಳತ್ತೂರು ಜಾರಂ ಮಖಾಂ ಉರೂಸ್ ಇಂದಿನಿಂದ(ಶುಕ್ರವಾರ) ಡಿ. 29ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 


ಇಂದು ಜುಮಾ ನಮಾಜಿನ ಬಳಿಕ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಸಿಯಾರತ್‍ಗೆ ನೇತೃತ್ವ ನೀಡುವರು. ಉರೂಸ್ ಸಮಿತಿ ಅಧ್ಯಕ್ಷ ಧ್ವಜಾರೋಹಣಗೈಯ್ಯುವರು. ರಾತ್ರಿ 7 ಗಂಟೆಗೆ ನಡೆಯುವ ಸಮ್ಮೇಳನವನ್ನು ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಎನ್.ಪಿ.ಎಂ.ಶರಾಪುದ್ದೀನ್ ತಂಙಳ್ ಹಾದಿ ದಾರಿಮಿ ರಬ್ಬಾನಿ ಕುನ್ನುಂಗೈ ಅಧ್ಯಕ್ಷತೆ ವಹಿಸುವರು. ಪಾಣಕ್ಕಾಡ್ ಹಮೀದಲಿ ಶಿಯಾಬ್ ತಂಙಳ್ ಮುಖ್ಯ ಅತಿಥಿಯಾಗಿರುವರು. ಅಸ್ಲಂ ಅಸ್ಹರಿ ಪೆÇಯ್ತುಂಕಡವ್ ಪ್ರಧಾನ ಭಾಷಣ ಮಾಡುವರು. ಜಮಾಯತ್ ಅಧ್ಯಕ್ಷ ಅಬ್ದುಲ್ ರಹಮಾನ್, ಇಬ್ರಾಹಿಂ ಖಲೀಲ್ ಫೈಸಿ, ಮಹಮೂದ್ ಸಾದಿ, ಅಬೂಬಕ್ಕರ್ ದಾರಿಮಿ, ಅಲವಿ ಬಾಕವಿ, ಅಬ್ದುಲ್ ರಶೀದ್ ಸಖಾಫಿ, ಅಬ್ದುಲ್ ರಹ್ಮಾನ್ ಖತ್ತರ್, ಅಲಿ ಬನಾರಿ ಭಾಗವಹಿಸುವರು. ಶನಿವಾರ ರಾತ್ರಿ ಮಜ್ಲಿಸುನ್ನೀರ್‍ಗೆ ಎನ್.ಪಿ.ಎಂ.ಶರಾಪುದ್ದೀನ್ ತಂಙಳ್ ನೇತೃತ್ವ ನೀಡುವರು. ಸಿರಾಜುದ್ದೀನ್ ಫೈಸಿ ಚೇರಾಲ್ ಉದ್ಘಾಟಿಸುವರು.

ವಿವಿಧ ದಿನಗಳಲ್ಲಿ ಹಲವು ಮಂದಿ ಗಣ್ಯರು ಭಾಗವಹಿಸುವರು. ಶನಿವಾರ ಸಮಾರೋಪ ಸಮಾರಂಭ ಜರಗಲಿದ್ದು, ಸಮಸ್ತ ಕೇರಳ ಜಂಇಯತ್ತುಲ್ ಉಲಮ ಅಧ್ಯಕ್ಷ ಸಯ್ಯದುಲ್ ಉಲಮ ಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಬಿ.ಕೆ. ಅಬ್ದುಲ್ ಖಾದರ್ ಅಲ್‍ಖಾಸಿಮಿ ಅಧ್ಯಕ್ಷತೆ ವಹಿಸುವರು. ಮಹಮ್ಯೂನ್ ಹುದವಿ ಪ್ರಧಾನ ಭಾಷಣ ಮಾಡುವರು. ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಭಾಗವಹಿಸುವರು.

ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೌಲೀದ್ ಮಜ್ಲಿಸ್‍ಗೆ ಕೆ.ಎಸ್. ಅಲಿ ತಂಙಳ್ ಕುಂಬೋಳ್ ನೇತೃತ್ವ ನೀಡುವರು.

ಸುದ್ದಿಗೋಷ್ಠಿಯಲ್ಲಿ ಪಿ.ಎಚ್. ಅಸ್ಹರಿ ಕಳತ್ತೂರು, ಅಬ್ದುಲ್ ರಹ್ಮಾನ್ ಮಡಪ್ಪಾಡಿ, ಅಬ್ದುಲ್ ರಹ್ಮಾನ್ ಖತ್ತರ್, ಅಲಿ ಬನಾರಿ, ಅಸೀಸ್ ಸುಲ್ತಾನ್, ಅಸೀಸ್ ಅಬಹಾ, ಹಕೀಂ ಪಾಚಾನಿ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries