ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿ ಕೂಡ ವಿಭಿನ್ನ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಒಬ್ಬರ ವ್ಯಕ್ತಿತ್ವವು ಅವರ ಗುಣಗಳು, ಜೀವನ ನಿರ್ಧರಿಸುತ್ತವೆ. ವ್ಯಕ್ತಿತ್ವವು ಆತನ ಗುಣಗಳ ನಿರ್ಧರಿಸುತ್ತವೆ. ಹಾಗೆ ನಿಮ್ಮ ಅನೇಕ ವಿಚಾರಗಳು, ನಡತೆಯಿಂದ ನಿಮ್ಮ ವ್ಯಕ್ತಿತ್ವ ಪತ್ತೆ ಮಾಡಬಹುದು. ಅದ್ರಲ್ಲೂ ನಿಮ್ಮ ಕೈ ಬೆರಳಿನ ಗಾತ್ರ ಕೂಡ ನಿಮ್ಮ ವ್ಯಕ್ತಿತ್ವ ವಿವರಿಸುತ್ತೆ.
ನಿಮ್ಮ ಕಿರುಬೆರಳಿನ ಗಾತ್ರವು ನಿಮ್ಮ ವ್ಯಕ್ತಿತ್ವ ಸೂಚಿಸುತ್ತದೆ ಎಂಬುದು ನಿಮಗೆ ಗೊತ್ತಾ? ಹೌದು ನಿಮ್ಮ ಕಿರುಬೆರಳಿನ ಗಾತ್ರದಿಂದ ನಿಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ನಾವು ಪತ್ತೆ ಮಾಡಬಹುದು. ಒಬ್ಬರ ಕೈಯಲ್ಲಿರುವ ರೇಖೆಗಳು ಒಬ್ಬರ ಭವಿಷ್ಯದ ಬಗ್ಗೆ ಹೇಳುವಂತೆ, ಕಿರುಬೆರಳಿನ ಗಾತ್ರವು ಒಬ್ಬರ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ.
ಈ ಮೇಲಿನ ಚಿತ್ರದಲ್ಲಿರುವ ಬೆರಳಿನ ಗಾತ್ರವನ್ನು ನೋಡಿ ನಿಮ್ಮ ವ್ಯಕ್ತಿತ್ವ ಯಾವ ರೀತಿಯದ್ದು ಎಂಬುದನ್ನು ನಾವು ತಿಳಿಯಬಹುದು. ಹಾಗಾದ್ರೆ ಈ ಎಬಿಸಿ ಎಂಬ ಮೂರು ವಿಧವಾದ ಕಿರುಬೆಳರಳಿನ ಆಕಾರದಲ್ಲಿ ನಿಮ್ಮ ಕಿರುಬೆರಳು ಯಾವ ರೀತಿಯ ಆಕಾರ ಹೊಂದಿದೆ? ಅದರ ಹಿಂದೆ ನಿಮ್ಮ ವ್ಯಕ್ತಿತ್ವ ಹೇಗೆ ನಿರ್ಧಾರವಾಗುತ್ತಿದೆ ಎಂದದನ್ನು ತಿಳಿಯಿರಿ.
ಟೈಪ್-ಎ
ನಿಮ್ಮ ಕಿರುಬೆರಳು ನಿಮ್ಮ ಉಂಗುರದ ಬೆರಳಿನ ಮೇಲಿನ ರೇಖೆಗೆ ಸಮಾನಾಂತರವಾಗಿದ್ದರೆ, ನೀವು ಇತರರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ನಿಮಗೆ ಹತ್ತಿರವಿರುವ ಜನರ ಬಳಿಯೂ ನೀವು ನಿಮ್ಮ ಮನಸ್ಸನ್ನು ತೆರೆಯುವುದಿಲ್ಲ. ಬಹುತೇಕ ನೀವು ಅಂತರ್ಮುಖಿಗಳಾಗಿರುತ್ತೀರಿ. ಆದ್ರೆ ನೀವು ಯಾವಾಗಲು ಸತ್ಯವನ್ನು ಮಾತನಾಡಲು ಇಷ್ಟಪಡುತ್ತೀರಿ. ಸಂಬಂಧಗಳ ಜೊತೆಗೆ ಪ್ರಾಮಾಣಿಕವಾಗಿರುತ್ತೀರಿ.
ನೀವು ಯಾವಾಗಲೂ ಗಲಾಟೆ, ಗದ್ದಲದಿಂದ ದೂರವೇ ಇರಲು ಇಷ್ಟಪಡುತ್ತೀರಿ. ಯಾರೊಂದಿಗೂ ಬಹುಬೇಗ ಬೆರೆಯುವುದಿಲ್ಲ, ಹಾಗೆ ಬೇರೆಯವರ ಜೊತೆಗೆ ವಿನಾಕಾರಣ ಜಗಳ, ಚರ್ಚೆ, ಮಾತುಕತೆಗೆ ಇಳಿಯುವುದಿಲ್ಲ. ನೀವು ನಿಮ್ಮ ಪಾಡಿಗೆ ಇರಲು ಇಷ್ಟ ಇಷ್ಟಪಡುತ್ತೀರಿ. ನೀವು ಎಂತಹ ಕಷ್ಟವನ್ನಾದರು ಒಬ್ಬಂಟಿಯಾಗಿಯೇ ಎದುರಿಸುಲು ಮುಂದಾಗುತ್ತಿರಿ. ನಿಮ್ಮ ಕಷ್ಟಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ನೀವು ಇಷ್ಟಪಡುವುದಿಲ್ಲ. ಹಾಗೆ ಬೇರೆಯವರಿಂದ ಯಾವುದಾದರು ವಸ್ತು ಕೇಳಿ ಪಡೆಯಲು ಹಿಂಜರಿಯುತ್ತೀರಿ.
ಟೈಪ್ - ಬಿ
ನಿಮ್ಮ ಕಿರುಬೆರಳು ನಿಮ್ಮ ಉಂಗುರದ ಬೆರಳಿನ ಮೇಲಿನ ರೇಖೆಗಿಂತ ಸ್ವಲ್ಪ ಉದ್ದವಾಗಿದ್ದರೆ ನೀವು ತುಂಬಾ ನಂಬಿಗಸ್ತರು ಮತ್ತು ತುಂಬಾ ಸೂಕ್ಷ್ಮ ಮನೋಭಾಬವ ಹೊಂದಿರುತ್ತೀರಿ. ನಿಮಗೆ ಒಬ್ಬ ಗೆಳೆಯ/ಗೆಳತಿ ಇದ್ದರೆ, ಅವರು ನಿಮಗೆ ಪ್ರಪಂಚವಾಗಿರುತ್ತಾರೆ. ನಿಮ್ಮ ಜೀವನದಲ್ಲಿ ನೀವು ಅವರಿಗೆ ಆದ್ಯತೆ ನೀಡುತ್ತೀರಿ. ನೀವು ಬಹಳ ಧೈರ್ಯಶಾಲಿಗಳು, ಜೀವನದಲ್ಲಿ ಯಾವುದೇ ಸವಾಲು ಎದುರಾದರೂ ಅದನ್ನು ಎದುರಿಸಲು ನೀವು ಹಿಂಜರಿಯುವುದಿಲ್ಲ. ನೀವು ಸಾಮಾನ್ಯವಾಗಿ ಶಾಂತವಾಗಿರಲು, ಒಂಟಿಯಾಗಿರಲು ಬಯಸುತ್ತೀರಿ. ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿಯೂ ಕೂಡ ಶಾಂತವಾಗಿರುತ್ತೀರಿ.
ಟೈಪ್- ಸಿ
ನಿಮ್ಮ ಕಿರುಬೆರಳು ಉಂಗುರದ ಬೆರಳಿನ ಮೇಲಿನ ರೇಖೆಗಿಂತ ಕೆಳಗಿದ್ದರೆ, ನೀವು ಉತ್ಸಾಹಭರಿತ ವ್ಯಕ್ತಿ ಮತ್ತು ಯಾವುದೇ ನಕಾರಾತ್ಮಕತೆಯು ನಿಮ್ಮನ್ನು ಸಮೀಪಿಸುವುದಿಲ್ಲ. ನೀವು ಹಳೆಯ ವಿಚಾರಗಳನ್ನು ತುಂಬಾನೆ ನೆನಪಿನಲ್ಲಿಡುತ್ತೀರಿ. ಮನಸ್ಸಿನಲ್ಲಿ ಬಹಳಷ್ಟು ಆಲೋಚನೆಗಳಿದ್ದರೂ ಯಾವುದನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ನೀವು ಪ್ರೀತಿ ಪಾತ್ರರಲ್ಲಿ ಯಾವಾಗಲು ಪ್ರಾಮಾಣಿಕವಾಗಿರುತ್ತೀರಿ. ಅಪರಿಚಿತರನ್ನು ಕೂಡ ನೀವು ಬಹುಬೇಗ ನಂಬುವಂತಹ ಮನೋಭಾವ ಹೊಂದಿದ್ದೀರಿ. ನಿಮ್ಮ ವಸ್ತುಗಳನ್ನು ಬಹಳಷ್ಟು ಜೋಪಾನ ಮಾಡುವುದರ ಕಡೆ ಹೆಚ್ಚು ಗಮನ ಕೊಡುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು samarasasudhi.com ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)