ಢಾಕಾ: ಭಾರತದ ಟಿ.ವಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಕೋರಿ ಬಾಂಗ್ಲಾದೇಶದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಭಾರತದ ಟಿ.ವಿ ವಾಹಿನಿಗಳಲ್ಲಿ ಪ್ರಚೋದನಾತ್ಮಕ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಕೀಲ ಇಖ್ಲಾಸ್ ಉದ್ದೀನ್ ಭುಯಿಯಾಂ ಅವರು ಅರ್ಜಿ ಸಲ್ಲಿಸಿದ್ದು, ಸೋಮವಾರ ಈ ವಿಷಯವನ್ನು ದೃಢಪಡಿಸಿದ್ದಾರೆ ಎಂದು 'ದಿ ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
'ಸ್ಟಾರ್ ಪ್ಲಸ್', 'ಝೀ ಬಾಂಗ್ಲಾ', 'ರಿಪಬ್ಲಿಕ್ ಬಾಂಗ್ಲಾ' ಸೇರಿದಂತೆ ಭಾರತದ ಎಲ್ಲ ವಾಹಿನಿಗಳ ನಿಷೇಧಕ್ಕೆ ಕೋರಲಾಗಿದೆ ಎಂದು ವರದಿಯು ತಿಳಿಸಿದೆ.