ನವದೆಹಲಿ: ಭಾರತದಲ್ಲಿ ವಿಮಾನಗಳ ವಿನ್ಯಾಸ ಮತ್ತು ತಯಾರಿಕೆಗೆ ಅನುಕೂಲ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತ ದೊರೆತಿದೆ.
90 ವರ್ಷಗಳ ಹಿಂದಿನ ವಿಮಾನ ಕಾಯ್ದೆಗೆ ಬದಲಾಗಿ ಭಾರತೀಯ ವಾಯುಯಾನ ವಿಧೇಯಕವನ್ನು ಸಂಸತ್ತು ಈ ತಿಂಗಳು ಅಂಗೀಕರಿಸಿತ್ತು.
ಡಿ.11ರ ಅಧಿಸೂಚನೆ ಪ್ರಕಾರ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ.
ವಿಮಾನದ ವಿನ್ಯಾಸ, ತಯಾರಿಕೆ, ನಿರ್ವಹಣೆ, ಬಳಕೆ, ಕಾರ್ಯಾಚರಣೆ, ಮಾರಾಟ, ರಫ್ತು ಮತ್ತು ಆಮದು ಹಾಗೂ ಅದಕ್ಕೆ ಸಂಬಂಧಿಸಿದ ನಿಯಂತ್ರಣ ಕುರಿತ ಕಾಯ್ದೆ ಇದಾಗಿದೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.