ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಿಸಲಿದ್ದಾರೆ.
ಮಂಗಳವಾರ ಬೆಳಗ್ಗೆ 11.30ಕ್ಕೆ ಸೆನೆಟ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಕುಲಪತಿಯೂ ಆಗಿರುವ ರಾಜ್ಯಪಾಲರು ಪಾಳಯಂನಲ್ಲಿರುವ ಕೇರಳ ವಿಶ್ವವಿದ್ಯಾನಿಲಯ ಕೇಂದ್ರ ಕಚೇರಿಗೆ ಮೊದಲು ಆಗಮಿಸುತ್ತಾರೆ. ಎರಡು ವರ್ಷಗಳ ಹಿಂದೆ ಸ್ವಾತಂತ್ರ್ಯದ 75ನೇ ವμರ್Áಚರಣೆಯ ನಿಮಿತ್ತ ಆರಿಫ್ ಮೊಹಮ್ಮದ್ ಖಾನ್ ಅವರು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರು ಆದರೆ ಎಡಪಕ್ಷಗಳ ಸಿಂಡಿಕೇಟ್ ಸದಸ್ಯರ ವಿರೋಧದಿಂದಾಗಿ ಅದನ್ನು ಕೈಬಿಡಲಾಗಿತ್ತು.
ಸಂಸ್ಕೃತ ವಿಚಾರ ಸಂಕಿರಣದ ವಿರುದ್ಧ ಎಡಪಕ್ಷಗಳು ಇದೀಗ ಧ್ವನಿ ಎತ್ತಿವೆ. ನಿರ್ವಹಣೆ ಕುರಿತು ಚರ್ಚಿಸಲು ಉಪಕುಲಪತಿ ಡಾ.ಮೋಹನ್ ಕುನುಮ್ಮೆಲ್ ಕರೆದಿದ್ದ ಸಭೆಯನ್ನು ಎಡ ಸಿಂಡಿಕೇಟ್ ಸದಸ್ಯರು ಬಹಿಷ್ಕರಿಸಿದರು.
ತಿರುಪತಿ ಶ್ರೀವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ (ಡಾ.) ರಾಣಿ ಸದಾಶಿವ ಮೂರ್ತಿ, ಐಸಿಪಿಆರ್ ಸದಸ್ಯ ಕಾರ್ಯದರ್ಶಿ ಪ್ರೊ (ಡಾ.) ಸಚ್ಚಿದಾನಂದ ಮಿಶ್ರಾ, ಕಾಲಡಿ ಶ್ರೀ ಶಂಕರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ (ಡಾ.) ಕೆ.ಕೆ. ಗೀತಾಕುಮಾರಿ, ಸಿಂಡಿಕೇಟ್ ಸದಸ್ಯ ಪಿ.ಎಸ್.ಗೋಪಕುಮಾರ್, ವಿವಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ. (ಡಾ.) ಸಿ.ಎನ್.ವಿಜಯಕುಮಾರಿ (ಸಮನ್ವಯಾಧಿಕಾರಿ), ಕಾಲಡಿ ವಿಶ್ವವಿದ್ಯಾಲಯದ ಮಾಜಿ ವಿಭಾಗದ ಮುಖ್ಯಸ್ಥ ಪ್ರೊ (ಡಾ) ಪಿ.ಸಿ.ಮುರಳಿಮಾಧವನ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರೊ. ಶ್ರೀನಿವಾಸ ವರ್ಖೇಡಿ (ಉಪಕುಲಪತಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ), ಪ್ರೊ. ಜಿ.ಎಸ್.ಆರ್. ಕೃಷ್ಣಮೂರ್ತಿ (ಉಪಕುಲಪತಿ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ), ಡಾ. ಬಲದೇವಾನಂದ ಸಾಗರ್ (ವಿಶ್ವ ಸಂಸ್ಕೃತ ಮಾಧ್ಯಮ ಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು), ಪ್ರೊ (ಡಾ.) ವಿಜಯಕುಮಾರ್.ಸಿಜಿ (ಉಪ ಕುಲಪತಿ, ಮಹರ್ಷಿ ಪಾಣಿನಿ ಮತ್ತು ವೇದ ವಿಶ್ವವಿದ್ಯಾಲಯ ಉಜ್ಜಯಿನಿ), ಪ್ರೊ ಪ್ರಹ್ಲಾದ್. ಆರ್. ಜೋಶಿ (ಉಪಕುಲಪತಿ, ಕುಮಾರ್ ಭಾಸ್ಕರ್ ವರ್ಮ ಸಂಸ್ಕೃತ ಮತ್ತು ಪ್ರಾಚೀನ ಅಧ್ಯಯನ ವಿಶ್ವವಿದ್ಯಾಲಯ, ನಲ್ಬರಿ, ಅಸ್ಸಾಂ), ಪ್ರೊ. ರಮೇಶ್ ಭಾರದ್ವಾಜ್ (ಉಪ ಕುಲಪತಿ, ಮಹರ್ಷಿ ವಾಲ್ಮೀಕಿ ಸಂಸ್ಕೃತ ವಿಶ್ವವಿದ್ಯಾಲಯ) ಮೊದಲಾದವರು ವಿಷಯ ಮಂಡಿಸಲಿದ್ದಾರೆ.