ಕಾಸರಗೋಡು: ಮುಳ್ಳೇರಿಯ ಬಿಸಿನೆಸ್ ಅಸೋಸಿಯೇಶನ್ ನೇತೃತ್ವದಲ್ಲಿ ಎರಡನೇ ವರ್ಷದ ಮುಳ್ಳೇರಿಯ ಟ್ರೇಡ್ ಫೆಸ್ಟ್ ಡಿ. 21ರಂದು ಆರಂಭಗೊಳ್ಳಲಿರುವುದಾಗಿ ಅಸೋಸಿಯೇಶನ್ ಅದ್ಯಕ್ಷ ಅಗ್ನೇಶ್ ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಳ್ಳೇರಿಯ ಪೇಟೆಯಲ್ಲಿ ವಿಶೇಷವಾಗಿ ಸಜ್ಜುಗೊಳಿಸಿರುವ ವಿಶಾಲ ಸಥಳದಲ್ಲಿ ಏಳು ದಿವಸಗಳ ಕಾಲ ಟ್ರೇಡ್‍ಫೆಸ್ಟ್ ನಡೆಯಲಿದೆ. 21ರಂದು ಸಂಜೆ 6ಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು ಫೆಸ್ಟ್ ಉದ್ಘಾಟಿಸುವರು. ಶಾಸಕರಾದ ಸಿ.ಎಚ್ ಕುಞಂಬು, ಅಶೋಕ್ ಕುಮಾರ್ ಪುತ್ತೂರು, ಭಾಗೀರಥೀ ಸುಳ್ಯ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು. ಸಣ್ಣ ವ್ಯಾಪಾರಿಗಳಿಂದ ತೊಡಗಿ ಬೃಹತ್ ಉದ್ದಿಮೆದಾರರು ಫೆಸ್ಟ್‍ನಲ್ಲಿ ಪಾಲ್ಗೊಳ್ಳವರು. ಅಮ್ಯೂಸ್‍ಮೆಂಟ್ ಪಾರ್ಕ್, ಕೃಷಿ ಯಂತ್ರಮೇಳ, ವಿವಿಧ ಆಹಾರ ಮೇಳ-ಫುಡ್ ಕೋರ್ಟ್, ಆಹಾರದ ವಿವಿಧ ಸ್ಟಾಲ್‍ಗಳು, ಮಕ್ಕಳು ಹಾಗೂ ಹಿರಿಯರಿಗಾಗಿ ಆಕರ್ಷಕ ಪಾರ್ಕ್‍ಗಳು, ಶಾಪಿಂಗ್ ಸ್ಟಾಲ್‍ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ದಿನ ಸಂಜೆ 4ರಿಂದ 10ರ ವರೆಗೆ ಫೆಸ್ಟ್ ಆಯೋಜಿಸಲಾಗಿದೆ. ಪ್ರತಿ ದಿನ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಡಿ. 27ರಂದು ಫೆಸ್ಟ್ ಸಂಪನ್ನಗೊಳ್ಳಲಿದೆ. ಕಳೆದ ವರ್ಷ ಮೂರು ದಿವಸಗಳ ಕಾಲ ನಡೆದ ಫೆಸ್ಟ್‍ನ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಒಂದು ವಾರದ ಟ್ರೇಡ್ ಫೆಸ್ಟ್ ಆಯೋಜಿಸಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ವಿಜಯನ್, ಗಣೇಶ ವತ್ಸ, ರಘುನಾಥ ಶೆಣೈ, ಹರೀಶ್ ಉಪಸ್ಥಿರಿದ್ದರು.