ಕಾಸರಗೋಡು: ಸಸ್ಯ ಶರೀರಶಾಸ್ತ್ರದ ಬಗ್ಗೆ ಕಾಸರಗೋಡು ಸಿಪಿಸಿಆರ್‍ಐ-ಐಸಿಎಆರ್‍ನಲ್ಲಿ ಮೂರು ದಿವಸಗಳ ಕಾಲ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನ ಗುರುವಾರ ಸಮಾರೋಪಗೊಂಡಿತು. ಎಎಸ್‍ಆರ್‍ಬಿ ಚೇರ್ಮಾನ್ ಹಾಗೂ ಹೊಸದಾಗಿ ಚುನಾಯಿತರಾದ ಎಎಸ್‍ಪಿಪಿ ಅಧ್ಯಕ್ಷ ಡಾ. ಸಂಜಯ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ. ಬಾಲಚಂದ್ರ ಹೆಬ್ಬಾರ್ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು. ನವದೆಹಲಿಯ ಐಎಸ್‍ಪಿಪಿ ಕಾರ್ಯದರ್ಶಿ ಮತ್ತು ಐಎಆರ್‍ಐ ಜಂಟಿ ನಿರ್ದೇಶಕ ಡಾ.ವಿಶ್ವನಾಥನ್ ಚಿನ್ನಸ್ವಾಮಿ ಅವರು ಸಮ್ಮೇಳನದ ಸಾಧನೆಗಳ ಬಗ್ಗೆ ಅವಲೋಕನ ನಡೆಸಿದರು. ಐಎಸ್‍ಪಿಪಿ ಕೋಶಾಧಿಕಾರಿ ಡಾ.ಮದನ್ ಪಾಲ್ ಸಿಂಗ್ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದರು. ಮುಖ್ಯ ಅತಿಥಿ ಡಾ.ಸಂಜಯ್ ಕುಮಾರ್ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು. ಪಿಬಿ ಮತ್ತು ಪಿಎಚ್‍ಟಿ ಮುಖ್ಯಸ್ಥ ಡಾ.ಮುರಳಿ ಗೋಪಾಲ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿ ಡಾ.ಎಸ್.ವಿ. ರಮೇಶ್ ವಂದಿಸಿದರು.
'ಸೆಲ್ ಇನ್ ಫ್ರಾಂಟಿಯರ್ಸ್ ಟು ಹೋಲ್ ಪ್ಲಾಂಟ್ ಫಿಸಿಯಾಲಜಿ: ಬ್ರಿಡ್ಜಿಂಗ್ ಸೈನ್ಸ್ ಅಂಡ್ ಸಸ್ಟೈನಬಿಲಿಟಿ' ಎಂಬ ವಿಚಾರ ಕೇಂದ್ರೀಕರಿಸಿ ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಕಾಸರಗೋಡು ಮತ್ತು ಇಂಡಿಯನ್ ಸೊಸೈಟಿ ಫಾರ್ ಪ್ಲಾಂಟ್ ಫಿಸಿಯಾಲಜಿ ಜಂಟಿ ಸಹಯೋಗದೊಂದಿಗೆ ಸಮ್ಮೇಳನ ಆಯೋಜಿಸಲಾಗಿತ್ತು.