ಕಾಸರಗೋಡು: ನಗರದ ಹೊಸ ಬಸ್‍ನಿಲ್ದಾಣ ಆಸುಪಾಸು ತಾಯಿ ಜತೆ ನಡೆದುಹೋಗುತ್ತಿದ್ದ 16ರ ಹರೆಯದ ಬಾಲಕಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ನೆಲ್ಲಿಕಟ್ಟೆ ಲಕ್ಷಂ ವೀಡ್ ಕಾಲನಿ ನಿವಾಸಿ ನವಾಸ್ ಪಿ.ಎಂ(40)ಎಂಬಾತನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಣಂಗೂರು ಶಿವಶೈಲ ನಿವಾಸಿ ಸುಕುಮಾರನ್ ಎಂಬವರು ನಗರದ ಜೈಲ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಬ್ಯಾಗ್ ಮತ್ತು ಮೊಬೈಲ್ ಕಳವುಗೈದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಈತನನ್ನು ವಿಚಾರಣೆಗೊಳಪಡಿಸಿದಾಗ ಕಾರಿನಿಂದ ಬ್ಯಾಗ್, ಮೊಬೈಲ್ ಕಳವುಗೈದಿರುವ ಬಗ್ಗೆ ಮಾಹಿತಿ ನಿಡಿದ್ದನು.