ಕಾಸರಗೋಡು: ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮಾಯ ದೇವಳದಲ್ಲಿ ಕೊಪ್ಪಲು ಕಾರ್ಯಕಾರನ ವಾರ್ಷಿಕ ಪ್ರಥಮ ಕೋಲ ವಿಜೃಂಭಣೆಯಿಂದ ನಿನ್ನೆ ನಡೆಯಿತು.
ಈ ಸಂದರ್ಭದಲ್ಲಿ ವಿಶೇಷ ಮಹಾಪೂಜೆ, ಶ್ರೀ ವೆಂಕಟರಮಣ ಮುಡಿಪು ಪೂಜೆ ಹಾಗೂ ನಾಗತಂಬಿಲ ಸೇವೆ ನಡೆಯಿತು. ದೇವಳ ಸೇವಾಸಮಿತಿ ಅಧ್ಯಕ್ಷ ಲೋಕೇಶ್ ಕೊಪ್ಪಲು, ದೇವಳ ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ದೇವಳದ ಮೇಲ್ವಿಚಾರಕ ಹಾಗೂ ಅರ್ಚಕ ಸಿ. ಎಚ್ ದಯಾನಂದ ಕೊಪ್ಪಲು ನೇತೃತ್ವ ವಹಿಸಿದ್ದರು. ಸಹಸ್ರಾರು ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.