ಇಡುಕ್ಕಿ: ಮುಳ್ಳರಿಂಗಾಡ್ ನಲ್ಲಿ ಕಾಡಾನೆ ದಾಳಿಗೆ ಯುವಕ ಸಾವನ್ನಪ್ಪಿದ್ದಾನೆ. ಮುಳ್ಳರಿಂಗಾಡ್ ನಿವಾಸಿ ಅಮರ್ ಇಲಾಹಿ (22) ಮೃತರು. ಭಾನುವಾರ ಮಧ್ಯಾಹ್ನ 3 ಗಂಟೆಸುಮಾರಿಗೆ ತೆಂಗಿನ ತೋಟದಲ್ಲಿ ಕಾಡಾನೆ ದಾಳಿ ನಡೆಸಿದೆ.
ತೆಂಗು ತೋಟದಲ್ಲಿದ್ದ ಹಸುವನ್ನು ಬಿಡಿಸಲು ಹೋದಾಗ ದಾಳಿ ನಡೆದಿದೆ. ಅಮರ್ ಇಲಾಹಿ ಅವರನ್ನು ತೊಡುಪುಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾರೆ. ಜೊತೆಗಿದ್ದ ವ್ಯಕ್ತಿ ಓಡಿ ಪಾರಾದರು.
ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮನೆಯಲ್ಲಿ ಅಮರ್ ಇಲಾಹಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ಬಡ ಕುಟುಂಬಕ್ಕೆ ಸೇರಿದವರು. ಅಮರ್ ವಾಸಸ್ತ್ಥಳ ಕಾಡಿಗೆ ಹತ್ತಿರದಲ್ಲಿದೆ.
ಕಳೆದ ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲು.