ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ 48ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಶ್ರೀ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ನೂತನವಗಿ ನಿರ್ಮಿಸಲಾದ ಶ್ರೀಧರ್ಮಶಾಸ್ತಾ ಭವನದ ಲೋಕಾರ್ಪಣಾ ಸಮಾರಂಭ ಡಿ. 3ರಿಂದ 5ರ ವರೆಗೆ ಜರುಗಲಿದೆ.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಶುಭಾಶೀರ್ವಾದ ಹಾಗೂ ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ಜರುಗಲಿರುವುದು.
3ರಂದು ಬೆಳಗ್ಗೆ ಗಣಪತಿ ಹೋಮ, ಹಸಿರುವಾಣಿ ಸಮರ್ಪಣಾ ಮೆರವಣಿಗೆ, ರಾತ್ರಿ 8.30ಕ್ಕೆ ನ್ರತ್ಯ ವೈವಿಧ್ಯ ನಡೆಯುವುದು. 4ರಂದು ಬೆಳಗ್ಗೆ 7.45ರಿಂದ 8.45ರ ಮಧ್ಯೆ ನಡೆಯುವ ಸಮಾರಂಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧರ್ಮಶಾಸ್ತಾ ಭವನದ ಲೋಕಾರ್ಪಣೆ ನಡೆಸುವರು. 10ಕ್ಕೆ ನಡೆಯುವ ಧಾರ್ಮಿಖ ಸಭೆಯಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅನುಗ್ರಹ ಭಾಷಣ ಮಾಡುವರು. ತಿರುವಿಳಕ್ಕ್ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಬಾಲನ್ ಮಾಸ್ಟರ್ ಪರಪ್ಪ ಧಾರ್ಮಿಕ ಭಾಷಣ ಮಾಡುವರು.
ಸಂಜೆ 6ಕ್ಕೆ ಇಡಿಯಡ್ಕ ದೇವಸ್ಥಾನ ವಠಾರದಿಂದ ವಿಶೇಷ ಪಾಲೆಕೊಂಬು ಮೆರವಣಿಗೆ, ರಾತ್ರಿ 8ಕ್ಕೆ ಭಕ್ತಿ ಗಾನಮೇಳ, 12ಕ್ಕೆ ಶ್ರಿ ಅಯ್ಯಪ್ಪನ್ ತಿರುವಿಳಕ್ಕ್ ಆರಂಭಗೊಳ್ಳುವುದು.