HEALTH TIPS

ರಾಜ್ಯ ಮಟ್ಟದ ಶಾಲಾ ಕಲೋತ್ಸವ- ಪ್ರಚಾರಕ್ಕಾಗಿ ರೀಲ್ಸ್ ಸ್ಪರ್ಧೆ

ತಿರುವನಂತಪುರಂ: ಜನವರಿ 4 ರಿಂದ 8 ರವರೆಗೆ ತಿರುವನಂತಪುರಂನಲ್ಲಿ ನಡೆಯಲಿರುವ 63ನೇ ರಾಜ್ಯ ಶಾಲಾ ಕಲಾ ಉತ್ಸವದ ಪ್ರಚಾರಕ್ಕಾಗಿ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ರಾಜ್ಯದ ಶಾಲೆಗಳ ನಡುವೆ ರೀಲ್ಸ್ ಸ್ಪರ್ಧೆ ಇರಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಕಲೋತ್ಸವದ ಪ್ರಚಾರಕ್ಕಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಸಾವಿರ ರೀಲ್‍ಗಳನ್ನು ಬಳಸಲಾಗುವುದು. ಯುವಜನೋತ್ಸವದ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಕಲೋತ್ಸವ ಪ್ರಚಾರಕ್ಕಾಗಿ ಸಾಮಾಜಿಕ ಮತ್ತು ಸಾಂಸ್ಕøತಿಕ ನಾಯಕರ ಸಂದೇಶ ವೀಡಿಯೊಗಳು ಸಹ ಇರುತ್ತವೆ.


ಶಾಲೆಗಳಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಭಾಗವಾಗಿರುವ ಸಂಸ್ಥೆಗಳೂ ರೀಲ್ಸ್ ಗಳನ್ನು ಸಿದ್ಧಪಡಿಸುತ್ತವೆ. ರಾಜ್ಯ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ (ಎಸ್.ಐ.ಇ.ಟಿ) ಆಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲೆಯ ಸ್ವಚ್ಛತೆ ಮತ್ತು ಪ್ರಕೃತಿ ಸಂರಕ್ಷಣೆಯಂತಹ ವಿಷಯಗಳನ್ನು ಆಧರಿಸಿ ರೀಲ್‍ಗಳನ್ನು ತಯಾರಿಸಬೇಕು. ಕಲೋತ್ಸವದ ವಿವಿಧ ಸ್ಥಳಗಳಿಗೆ ನದಿಗಳ ಹೆಸರುಗಳನ್ನು ನಿಗದಿಪಡಿಸಿರುವುದರಿಂದ ನದಿಗಳು ರೀಲ್‍ನ ವಿಷಯವಾಗಬಹುದು. ಸಾಮಾಜಿಕ-ಸಾಂಸ್ಕೃತಿಕ ಅನನ್ಯತೆಯೊಂದಿಗೆ ಒಂದು ನಿಮಿಷದವರೆಗಿನ ರೀಲ್‍ಗಳನ್ನು ಪರಿಗಣಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳ ಆಧಾರದ ಮೇಲೆ ಉತ್ತಮ ಶಾಲೆಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಯ ರೀಲ್‍ಗಳನ್ನು ಡಿಸೆಂಬರ್ 25 ರ ಮೊದಲು keralaschoolkalolsavam@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ : 0471-2338541 ಸಂಪರ್ಕಿಸಬಹುದು.

ರೀಲ್ಸ್ ಉತ್ಸವದ ಅಂಗವಾಗಿ ಸಿದ್ಧಪಡಿಸಲಾದ ಮೊದಲ 4 ರೀಲ್‍ಗಳನ್ನು ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಜಿಲ್ಲಾಧಿಕಾರಿ ಅನುಕುಮಾರಿ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್. ಅನಿಲ್, ಎಸ್‍ಐಇಟಿ ನಿರ್ದೇಶಕ ಬಿ. ಅಬುರಾಜ್, ಎ.ಡಿ.ಎಂ. ಪಿ.ಕೆ.ವಿನೀತ್ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries