ಕೊಲ್ಲಂ: ನಗರದ ಚಿಕ್ಕಪುಟ್ಟ ಅಂಗಡಿಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ ಬೋರ್ಡ್ ಗಳನ್ನು ನಿನ್ನೆ ಕೋರ್ಟ್ ಸಂಕೀರ್ಣದ ಶಿಲಾನ್ಯಾಸಕ್ಕೆ ಬಂದಿದ್ದ ಹೈಕೋರ್ಟ್ ನ್ಯಾಯಾಧೀಶರು ಮಧ್ಯ ಪ್ರವೇಶಿಸಿ ತಕ್ಷಣ ಬೋರ್ಡ್ ಗಳನ್ನು ತೆಗೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರಪಾಲಿಕೆ ಕಾರ್ಯದರ್ಶಿಗೆ ಸಮನ್ಸ್ ನೀಡುವಂತೆ ನ್ಯಾಯಾಧೀಶರು ಈ ಸಂದರ್ಭ ಆದೇಶಿಸಿದರು.
ರಸ್ತೆಬದಿಯಲ್ಲಿ ಫ್ಲಕ್ಸ್ ಬೋರ್ಡ್ ಅಳವಡಿಸದಂತೆ ಕೋರ್ಟ್ ಆದೇಶವಾಗಿದೆ. ಚಿನ್ನಕಾಡ್ ಪರಿಸರದಲ್ಲಿ ಫ್ಲಕ್ಸ್ ಬೋರ್ಡ್‍ಗಳು ತುಂಬಿ ಪ್ರಯಾಣಿಕರ ಕಣ್ಣಿಗೆ ಅಪಾಯವಾಗುವುದನ್ನು ಗಮನಿಸಿದ ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ಪಾಲಿಕೆ ಕಾರ್ಯದರ್ಶಿಗೆ ಕರೆ ಮಾಡಿ ಬೋರ್ಡ್ ಬದಲಾಯಿಸುವಂತೆ ಸೂಚಿಸಿದರು. ದಂಡ ವಿಧಿಸುವ ಎಚ್ಚರಿಕೆ ನೀಡಿದ ನ್ಯಾಯಾಧೀಶರು ಒಂದು ಗಂಟೆಯೊಳಗೆ ಫ್ಲಕ್ಸ್ ಬೋರ್ಡ್ ಗಳನ್ನು ತೆಗೆಯಲಾಯಿತು.
ಅಂಗಡಿಯಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ನೂರಾರು ಫ್ಲಕ್ಸ್ ಬೋರ್ಡ್ ಗಳಿದ್ದವು. ನಗರದಲ್ಲಿ ಬೇರೆಡೆ ಹಾಕಿರುವ ಬೋರ್ಡ್‍ಗಳನ್ನೂ ತಕ್ಷಣ ಬದಲಾಯಿಸಲಾಗುವುದು ಎಂದು ಪಾಲಿಕೆಯವರು ತಿಳಿಸಿದ್ದು, ಎಲ್ಲ ಫ್ಲಕ್ಸ್ ಬೋರ್ಡ್‍ಗಳನ್ನು ಬದಲಾಯಿಸಿದ ನಂತರವೂ ಕೆಲವು ಅಂಗಡಿಯಲ್ಲಿ ಮತ್ತೆ ಬೋರ್ಡ್ ಕಾಣಿಸಿಕೊಂಡಿದೆ ಎಮದು ತಿಳಿದುಬಂದಿದೆ.