HEALTH TIPS

ಗಣೇಶ್ ಪ್ರಸಾದ್ ಮಂಜೇಶ್ವರರ ಚಿಲ್ಲಾ ಕೃತಿ ಲೋಕಾರ್ಪಣೆ-ರಾಷ್ಟ್ರಕವಿಯ ನೆಲದಲ್ಲಿ ಭರವಸೆಯ ಸಾಹಿತ್ಯ ಕೃಷಿಕ ಹೆಮ್ಮೆ ತಂದಿದೆ=ಕಾಸರಗೋಡು ಚಿನ್ನಾ

ಮಂಜೇಶ್ವರ: ಸಾಹಿತ್ಯ ಚಟುವಟಿಕೆಗಳು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ. ಅಕ್ಷರ ಲೋಕದ ಪಯಣ ವೈಚಾರಿಕತೆಯೊಂದಿಗೆ ಸಾಗಿದಾಗ ಬರಹಗಳು ಶಕ್ತಿಪಡೆದು ಹೊಸದೊಂದು ಹುಟ್ಟಿಕೊಳ್ಳುತ್ತದೆ ಎಂದು ಹಿರಿಯ ರಂಗಕರ್ಮಿ, ಸಂಘಟಕ ಕಾಸರಗೋಡು ಚಿನ್ನಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಲಚ್ಚು ಪ್ರಕಾಶನ ಮಂಗಳೂರು ಹಾಗೂ ರಂಗಚಿನ್ನಾರಿ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಶಿಕ್ಷಕ, ಸಾಹಿತಿ ಗಣೇಶ್ ಪ್ರಸಾದ್ ಮಂಜೇಶ್ವರ ಇವರ ಕಥಾ ಸಂಕಲನ 'ಚಿಲ್ಲಾ' ಕೃತಿಯನ್ನು ಭಾನುವಾರ ಅಪರಾಹ್ನ ಮಂಜೇಶ್ವರ ಗಿಳಿವಿಂಡು ಆವರಣದಲ್ಲಿ  ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಬಹುಭಾಷಾ ಸಂಗಮಭೂಮಿಯಾದ ಮಂಜೇಶ್ವರದ ಕೀರ್ತಿಯನ್ನು ಪಸರಿಸಿದ ರಾಷ್ಟ್ರಕವಿ ಗೋವಿಂದ ಪೈಗಳ ಮಣ್ಣಲ್ಲಿ ಗಣೇಶ ಪ್ರಸಾದ್ ಭರವಸೆಯ ಯುವಕವಿಗಳಾಗಿ, ಕಾದಂಬರಿಕಾರರಾಗಿ ಹಲವು ವಿಧದದಲ್ಲಿ ಕಾರ್ಯಪ್ರವೃತ್ತರಾಗಿರುವುದು ಕಾಸರಗೋಡಿಗೆ ಹೆಮ್ಮೆ ಎಂದವರು ಅಭಿಪ್ರಾಯಪಟ್ಟರು. 


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿ, ಕತೆ ಅನುಭವದ ಮೂಸೆಯಿಂದ ಜನ್ಮತಾಳುವ ಅಂತರಾಳದ ಭಾವ ಸ್ಪುರಣಗಳಾಗಿವೆ. ಮಾತನ್ನು ಕಡೆಯುವ ಕ್ರೀಯೆ ಕವಿತೆಯಾದರೆ, ಮಾತನ್ನು ನಡೆಸುವ ಕ್ರೀಯೆ ಕಥೆಗಳಾಗಿವೆ. ಮಾತಿಗೆ ನಾದಮಾಧುರ್ಯ ಸಂಗೀತ ಸುಧೆಯಾಗಿ ಸೊಗದ ನೊಗ ಎಳೆಯುತ್ತದೆ ಎಂದವರು ವಿಶ್ಲೇಶಿಸಿದರು.ಕವಿತೆ, ಕಥೆ, ಅಂಕಣ ಬರಹ, ಗಾಯನ, ಸಂಗೀತ, ವಿಮರ್ಶೆ, ಅಧ್ಯಾಪನ ಹೀಗೆ ಬಹುಮುಖ ವ್ಯಕ್ತಿತ್ವದ ಗಣೇಶ ಪ್ರಸಾದರು ಹೆಮ್ಮೆಯ ಬರಹಗಾರ ಎಂದವರು ತಿಳಿಸಿದರು. 


ನಿವೃತ್ತ ಪ್ರಾಂಶುಪಾಲ, ಲೇಖಕ ಪ್ರೊ.ಪಿ.ಎನ್.ಮೂಡಿತ್ತಾಯ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.ನಿವೃತ್ತ ಶಿಕ್ಷಕಿ ಪ್ರಭಾ ನಾಯಕ್ ಉಪಸ್ಥಿತರಿದ್ದರು.ಈ ಸಂದರ್ಭ ಗಣೇಶ್ ಪ್ರಸಾದ್ ಅವರನನು ಕಲ್ಲಚ್ಚು ಪ್ರಕಾಶನದ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. 


ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್.ನಾಯಕ್ ಪ್ರಶ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕೃತಿಯ ಬಗ್ಗೆ ಮಾತನಾಡಿದರು. ಕೃತಿಕಾರ ಗಣೇಶ್ ಪ್ರಸಾದ್ ಮಂಜೇಶ್ವರ ಮಾತನಾಡಿ, ಕೃತಿ ಮೂಡಿಬಂದ ಬಗೆ ವಿವರಿಸಿದರು. ರಶ್ಮಿ ನಾಯಕ್ ವಂದಿಸಿದರು. ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries