ಕೊಚ್ಚಿ: ಕಾಲೂರು ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದ ವಿಐಪಿ ಗ್ಯಾಲರಿಯಿಂದ ಬಿದ್ದು ಶಾಸಕಿ ಉಮಾ ಥಾಮಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಶಾಸಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬೀಳುವ ರಭಸದಲ್ಲಿ ಅವರ ತಲೆ ಕಾಂಕ್ರೀಟ್ ಮೇಲೆ ಹೊಡೆದು ಗಂಭೀರ ಗಾಯಗೊಂಡರು.
ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳನ್ನು ನಡೆಸಲಾಯಿತು. ಅವರ ತಲೆ ಕಾಂಕ್ರೀಟ್‍ಗೆ ಬಲವಾಗಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶಾಸಕಿ ಇಪ್ಪತ್ತು ಅಡಿ ಆಳಕ್ಕೆ ಬಿದ್ದಿದ್ದಾರೆ. ಶಾಸಕರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆ ತಲುಪಿದಾಗ ತೀವ್ರ ರಕ್ತಸ್ರಾವವಾಗಿತ್ತು. ಉಮಾ ಥಾಮಸ್ ಕ್ರೀಡಾಂಗಣದಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ವಿಐಪಿ ಗ್ಯಾಲರಿಯ ಕೊನೆಯಲ್ಲಿ ನಿಂತಿದ್ದ ಉಮಾ ಥಾಮಸ್ ತಾತ್ಕಾಲಿಕ ಬ್ಯಾರಿಕೇಡ್‍ನಿಂದ ಜಾರಿ ಬಿದ್ದಿದ್ದಾರೆ. 20 ಅಡಿ ಆಳಕ್ಕೆ ಬಿದ್ದು ತೀವ್ರ ಗಾಯಗೊಂಟಡಿರುವರು.
ಗಿನ್ನಿಸ್ ದಾಖಲೆಯ ಉದ್ದೇಶದಿಂದ ಆಯೋಜಿಸಿದ್ದ ಮೃದಂಗನಾದಂ ನೃತ್ಯ ಸಂಜೆ ವೇಳೆ ಈ ಅವಘಡ ಸಂಭವಿಸಿದೆ. ಜಿಲ್ಲಾಧಿಕಾರಿ ಕೂಡ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸಚಿವ ಸಾಜಿ ಚೆರಿಯನ್ ಮತ್ತಿತರರು ವೇದಿಕೆಯಲ್ಲಿ ಕುಳಿತಿದ್ದಾಗ ಈ ಅವಘಡ ಸಂಭವಿಸಿದೆ.