HEALTH TIPS

ವಾರಾಣಸಿ: ಶಿವನ ಪುರಾತನ ದೇಗುಲ ಪತ್ತೆ

 ಲಖನೌ: ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯಲ್ಲಿ ಪುರಾತನ ಭಸ್ಮಶಂಕರ ದೇವಾಲಯ ಪತ್ತೆಯಾಗಿ ಗಮನ ಸೆಳೆದಿರುವ ನಡುವೆಯೇ, ವಾರಾಣಸಿಯಲ್ಲಿ ಪುರಾತನ ಶಿವನ ದೇವಾಲಯವೊಂದು ಪತ್ತೆಯಾಗಿದೆ.

ವಾರಾಣಸಿಯ ಮದನಪುರ ಪ್ರದೇಶದಲ್ಲಿರುವ ಮನೆಯೊಂದರಲ್ಲಿ, ಮುಚ್ಚಿದ್ದ ಸ್ಥಿತಿಯಲ್ಲಿ ಈ ದೇವಾಲಯ ಪತ್ತೆಯಾಗಿದೆ.

ಮದನಪುರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಈ ದೇವಸ್ಥಾನ, ಸುಮಾರು 250 ವರ್ಷಗಳಷ್ಟು ಹಳೆಯದು ಎಂದು ಕೆಲ ಹಿಂದೂ ಪರ ಸಂಘಟನೆಗಳು ಹೇಳಿಕೊಂಡಿವೆ.


ದೇವಾಲಯದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಭಾರಿ ಸಂಖ್ಯೆಯಲ್ಲಿ ಜನರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯವನ್ನು ತೆರೆಯಬೇಕು ಹಾಗೂ ಪೂಜಾ ವಿಧಿಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

'ಬಹಳ ಹಳೆಯ ದೇವಸ್ಥಾನವಾಗಿರುವಂತೆ ತೋರುತ್ತದೆ. ಇದು, ಪಟ್ಟಣದಲ್ಲಿರುವ ಪ್ರಸಿದ್ಧ 'ಗೋಲ್‌ ಚಬೂತರ' (ಗೋಲಾಕಾರದ ವೇದಿಕೆ)ಕ್ಕೆ ಹತ್ತಿರದಲ್ಲಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಗಿ ಭದ್ರತೆ: ಈ ಬೆಳವಣಿಗೆ ಬೆನ್ನಲ್ಲೇ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಪ್ರಾಂತೀಯ ಸಶಸ್ತ್ರ ಪೊಲೀಸರನ್ನು (ಪಿಎಸಿ) ಸ್ಥಳದಲ್ಲಿ ನಿಯೋಜಿಸಿದೆ.

'ದೇವಸ್ಥಾನದ ಬಾಗಿಲು ತೆರೆದು, ಪೂಜಾ ಕಾರ್ಯಗಳಿಗೆ ಮುಕ್ತಗೊಳಿಸುವಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಆದರೆ, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಮೂಲಗಳು ಹೇಳಿವೆ.

ದೇವಾಲಯ ಪತ್ತೆಯಾಗಿರುವ ಮನೆಯನ್ನು ಹಲವು ದಶಕಗಳ ಹಿಂದೆಯೇ ಮುಸ್ಲಿಂ ವರ್ತಕರೊಬ್ಬರಿಗೆ ಮಾರಾಟ ಮಾಡಲಾಗಿತ್ತು ಎಂದು ವರದಿಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries