ಉಪ್ಪಳ:ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಬಾಕುಡ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ಡಿ. 29 ರಂದು ಪ್ರೇರಣಾ ಸಭಾಂಗಣ ಹೊಸಂಗಡಿಯಲ್ಲಿ ಜರಗಲಿದೆ. ಇದರಂಗವಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕುಡಾಲು ಶ್ರೀ ಕೋಮಾರು ಚಾಮುಂಡಿ ದೈವಸ್ಥಾನದಲ್ಲಿ ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಅಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಕುಡ ಸಮಾಜದ ಹದಿನೆಂಟು ದೈವಸ್ಥಾನದ ಹಿರಿಯರ ಹಾಗೂ ಕಾರ್ಣವರ ಒಕ್ಕೂಟದ ಅಧ್ಯಕ್ಷ ಶಂಕರ ಅಡ್ಕ ನೆರವೇರಿಸಿದರು. ಆಮಂತ್ರಣ ಪತ್ರಿಕೆಯನ್ನು ಮದಿಪುದ ಮಾಣಿಕ್ಯ ಖ್ಯಾತಿಯ ಕೃಷ್ಣ ಅಟ್ಟೆಗೋಳಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯರ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ಮಂಗಳೂರು, ಭಾಸ್ಕರ ಪಚ್ಲಂಪಾರೆ, ತೋಮ ಕೊಕ್ಕೆಜಾಲ್, ಪ್ರವೀಣ್ ಮಂಜೇಶ್ವರ, ಕೇಶವ ಅಂಗಡಿಪದವು, ಉದಯ ಪಚ್ಲಂಪಾರೆ, ಬಾಕುಡ ಸಮಾಜ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ತುಳಸಿ ದಾಸ್ ಮಂಜೇಶ್ವರ, ಸುರೇಶ್ ಮಂಗಲ್ಪಾಡಿ, ಕುಡಾಲು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಮ ಕುಳೂರು, ಪದಾಧಿಕಾರಿಗಳಾದ ಸುರೇಶ್ ಕುಳೂರು, ರಂಜಿತ್ ಸಂತಡ್ಕ, ರವಿ ತಾಳಿಪಡ್ಫು, ಭಾಸ್ಕರ ಮೊಗ್ರಾಲ್, ಸುನೀಲ್ ಮಂಗಲ್ಪಾಡಿ, ಚಿಣ್ಣರ ಚಿಲುಮೆ ಪದಾಧಿಕಾರಿಗಳಾದ ರಾಜೇಶ್ ಕೊಡ್ಲಮೊಗರು, ಗುರುವ ಕೋಡಿಬೈಲ್, ಹರೀಶ್ ಮಾಸ್ತರ್ ಅಂಗಡಿಪದವು, ಪವನ್ ಹೊಸಂಗಡಿ, ಪ್ರಿಜ್ಜು ಬಳ್ಳಾರ್, ನಿರಂಜನ್ ಮಾಸ್ತರ್ ಕುಂಜತ್ತೂರು, ಉದಯ್ ಕುಮಾರ್ ಸೋಂಕಾಲ್, ಚಂದ್ರಹಾಸ ಕತ್ತೆರಿಕೋಡಿ ಹಾಗೂ ಕುಡಾಲ್ ದೈವಸ್ಥಾನದ ಆಡಳಿತ ಸಮಿತಿಯ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನಿರ್ದೇಶಕ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಿಣ್ಣರ ಚಿಲುಮೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಂಚಾಲಕ ವಿಠಲ್ ನಾರಾಯಣ ಬ0ಬ್ರಾಣ ವಂದಿಸಿದರು.