ಕಾಸರಗೋಡು: ಪುಲ್ಲೂರು-ಪೆರಿಯ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ 'ಬಯಲೂ-ಮನೆಯೂ' ಸಂಘಟನೆ ಮೂಲಕ ಕೃಷಿ ಸಂಶೋಧನೆ ಮತ್ತು ಕೃಷಿಪರ ಚಟುವಟಿಕೆಗಳಿಗಾಗಿ ಕೊಡಮಾಡುವ ಹಸಿರು ಪ್ರಶಸ್ತಿಯನ್ನು ಡಾ.ಸಂತೋಷ್ ಕುಮಾರ್ ಕೂಕಲ್ ಅವರಿಗೆ ನೀಡಲಾಗುವುದು ಎಂದು ಜೂರಿ ಸಮಿತಿ ಅಧ್ಯಕ್ ಡಾ. ಕೆ. ಚಂದ್ರನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಹತ್ತು ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಅಲ್ಗಾನ್ ಎಂಜಿ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದು, ಕೃಷಿಗೆ ಸಂಬಂಧಿಸಿದ ಮಹತ್ವದ ಲೇಖನಗಳು ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ.
ಡಿ. 21ರಂದು ಬೆಳಗ್ಗೆ 10ಕ್ಕೆ ಪೆರಿಯ ಆಯಂಪಾರೆಯಲ್ಲಿ ನಡೆಯುವ ಸಮಾರಂಭದಲ್ಲಿ ತ್ರಿಶೂರ್, ಕನ್ನರಾ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗವಾಸ್ ರಾಗೇಶ್ ಸಂಗಮ ಉದ್ಘಾಟಿಸುವರು. ಈ ಸಂದರ್ಭ ಉತ್ತಮ ಶಿಕ್ಷಕ ಪ್ರಶಸ್ತಿ ವಇಜೇತ ಬಾಲನ್ ಕುನ್ನುಮ್ಮಲ್ ಹಾಗೂ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಂಘಟನೆ ಪದಾಧಿಕಾರಿಗಳಾದ ಜನಾರ್ದನನ್ ಪಾನೂರು, ನಾರಾಯಣನ್ ಕಣ್ಣಾಲಯಂ, ರವೀಂದ್ರನ್ ಕೊಡಕ್ಕಾಡ್, ಎ. ಬಾಲಕೃಷ್ಣನ್ ಉಪಸ್ಥಿತರಿದ್ದರು.