ಕಾಸರಗೋಡು: ಬ್ಯಾಂಕ್‍ನಲ್ಲಿ ಅಡವಿರಿಸಿದ್ದ ಚಿನ್ನಾಭರಣ ಬಿಡಿಸಿ, ಇದನ್ನು ಮಾರಾಟಗೈದು ಮೊತ್ತ ವಾರಸುದಾರರಿಗೆ ವಾಪಾಸುಮಾಡದ ಪ್ರಕರಣಕ್ಕೆ ಸಂಬಂಧಿಸಿ ಖತ್ತಾರ್‍ನಲ್ಲಿ ಖಾಸಗಿ ಆನ್‍ಲೈನ್ ಚ್ಯಾನಲ್ ನಡೆಸುತ್ತಿರುವ, ಕಾಸರಗೋಡು ನ್ಯಾಶನಲ್ ನಗರ ನಿವಾಸಿ ಜುಬೈರ್ ಎಂಬಾತನ ವಿರುದ್ಧ ನಗರ ಠಾಣೆ ಪೊಲೀಸರು ಕೆಸು ದಾಖಲಿಸಿಕೊಂಡಿದ್ದಾರೆ.
ಮೊಗ್ರಾಲ್ ರಹಮತ್‍ನಗರ ನಿವಾಸಿ ಕೆ. ಯೂಸುಫ್ ಎಂಬವರ ದೂರಿನ ಮೇರೆಗೆ ಈ ಕೇಸು. ತಾನು ಬ್ಯಾಂಕಿನಲ್ಲಿ ಅಡವಿರಿಸಿದ್ದ ಚಿನ್ನಾಭರಣವನ್ನು ಬಿಡಿಸಿ ನೀಡುವಂತೆ ಸ್ನೇಹಿತ ಜುಬೈರ್ ಕೈಗೆ 6.30 ಲಕ್ಷ ರೂ. ನೀಡಿದ್ದು, ಆರೋಪಿ ಚಿನ್ನವನ್ನು ಬ್ಯಾಂಕಿನಿಂದ ಪಡೆದು, ಇದನ್ನು ತನಗರಿವಿಲ್ಲದೆ ಮಾರಾಟಮಾಡಿದ್ದಾನೆ. ಇದರಲ್ಲಿ 75ಸಾವಿರ ರೂ. ಮಾತ್ರ ನೀಡಿದ್ದು, ಬಾಕಿ 5.55ಲಕ್ಷ ರೂ. ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.