ಇದರಿಂದ ಚರ್ಮ ಒಡಯುವುದು, ಗಡಸಾಗುವುದು, ಒರಟಾಗುವುದು ಸಾಮಾನ್ಯವಾಗಿ ನಡೆಯುತ್ತದೆ. ಇನ್ನು ಚಳಿಗಾಲದಲ್ಲಿ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ನಾವು ನೋಡುತ್ತೇವೆ. ಹಾಗೆ ಈ ಚಳಿಗಾಲದಲ್ಲಿ ಬೇರೆಯವರಿಗಿಂತ ನಿಮಗೆ ಹೆಚ್ಚು ಚಳಿಯಾಗುತ್ತಿದೆ ಎಂದು ನಿಮಗೆ ಎಂದಾದ್ರು ಅನಿಸಿದ್ಯಾ? ಏಕಂದ್ರೆ ಬೇರೆಯವರು ಚಳಿಗಾಲದಲ್ಲಿ ನಿಮ್ಮಷ್ಟು ಚಳಿ ಅನುಭವಿಸುತ್ತಿಲ್ಲ ಎಂಬ ಅನುಮಾನ ಎಂದಾದ್ರು ನಿಮಗೆ ಬಂದಿದ್ಯಾ?
ಕೆಲವೊಂದು ಸಮಯದಲ್ಲಿ ಈ ರೀತಿ ಉಂಟಾಗುತ್ತದೆ. ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಚಳಿಯ ಅನುಭವವಾಗಬೇಕು ಎಂಬ ನಿಯಮವೇನಿಲ್ಲ. ಆದ್ರೆ ಯಾವಾಗಲು ನಿಮಗೆ ಹೆಚ್ಚಿನ ಚಳಿ ಅನುಭವವಾಗುವುದು ಹಾಗೆ ಬೇರೆಯವರಿಗೆ ಹೋಲಿಸಿದರೆ ನೀವು ಹೆಚ್ಚು ಚಳಿಯಲ್ಲಿ ನಡುಗುವುದು ಉಂಟಾಗುತ್ತಿದ್ದರೆ ನಿಮ್ಮಲ್ಲಿ ಈ ಸಮಸ್ಯೆ ಇರುವ ಸಾಧ್ಯತೆ ದಟ್ಟವಾಗಿದೆ.
ಬೇರೆಯವರಿಗಿಂತ ನಿಮ್ಮಲ್ಲಿ ಚಳಿ ಹೆಚ್ಚಾದರೆ ವಿಟಮಿನ್ ಕೊರತೆಯ ಲಕ್ಷಣ ಇರಬಹುದು: ಚಳಿಗಾಲ ಮಾತ್ರವಲ್ಲ ಎಲ್ಲಾ ಸಮಯದಲ್ಲು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯನ್ನು ಥರ್ಮೋರ್ಗ್ಯುಲೇಷನ್ ಎಂದು ಕರೆಯಲಾಗುತ್ತದೆ. ಕಬ್ಬಿಣ, ವಿಟಮಿನ್ ಬಿ 12 ಮತ್ತು ಫೋಲೇಟ್‌ನಂತಹ ಪ್ರಮುಖ ಜೀವಸತ್ವಗಳ ಕೊರತೆಯೂ ಈ ಥರ್ಮೋರ್ಗ್ಯುಲೇಷನ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು. ಇದರಿಂದಾಗಿ ನಿಮ್ಮ ದೇಹ ಹೆಚ್ಚು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳಲು ಪರದಾಡುತ್ತದೆ.
ಚಳಿಗಾಲದಲ್ಲೂ ಕೆಲವರು ಕಡಿಮೆ ಬಟ್ಟೆ ಧರಿಸುವುದು, ಸಾಮಾನ್ಯ ದಿನದಂತೆ ಓಡಾಡುವುದು ಮಾಡುತ್ತಾರೆ. ಇವರಲ್ಲಿ ಈ ಥರ್ಮೋರ್ಗ್ಯುಲೇಷನ್ ಅಂಶ ಹೆಚ್ಚಾಗಿರುತ್ತದೆ. ಅಂದರೆ ಪೋಷಕಾಂಶ ಹಾಗೂ ವಿಟಮಿನ್‌ಗಳು ಅವರಲ್ಲಿ ಸರಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದ್ರೆ ಈ ವಿಟಮಿನ್ ಕೊರತೆಯಾದವರಲ್ಲಿ ಸ್ವಲ್ಪ ಹೆಚ್ಚಾಗಿ ಚಳಿ ಕಾಣಿಸಿಕೊಳ್ಳುತ್ತದೆ. ಆದ್ರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿ ಸಿಗುತ್ತಾರೆ.
ದೇಹದಾದ್ಯಂತ ಆಮ್ಲಜನಕವನ್ನು ಸರಬರಾಜು ಮಾಡುವಂತಹ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸಲು ಕಬ್ಬಿಣವು ಅವಶ್ಯಕವಾಗಿದೆ. ಈ ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಸ್ನಾಯುಗಳು ಮತ್ತು ಅಂಗಾಂಶಗಳು ಶಾಖವನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ರಕ್ತಹೀನತೆಯಿಂದಲೂ ಕೂಡ ಇದು ಉಂಟಾಗುತ್ತದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಶೀತದಂತಹ ಲಕ್ಷಣ ಕಾಣಿಸುತ್ತದೆ. ಹಾಗೆ ಈ ವಿಟಮಿನ್ ಬಿ 12 ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. B12 ಕೊರತೆಯು ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆ ಕೊರತೆಗೆ ಕಾರಣವಾಗುತ್ತದೆ. ಚರ್ಮದ ಆರೋಗ್ಯಕ್ಕೆ ವಿಟಮಿನ್ ಸಿ ಬಹಳ ಮುಖ್ಯವಾಗುತ್ತದೆ. ಹಾಗೆ ಕಬ್ಬಿಣಾಂಶ ಹೀರಿಕೊಳ್ಳುವಲ್ಲಿಯೂ ಈ ವಿಟಮಿನ್ ಸಿ ಪ್ರಮಾಣ ಮುಖ್ಯವಾಗುತ್ತದೆ. ಒಂದು ವೇಳೆ ಈ ವಿಟಮಿನ್ ಸಿ ನಿಮ್ಮ ದೇಹದಲ್ಲಿ ಕಡಿಮೆಯಾದಾಗಲೂ ಕಬ್ಬಿಣಾಂಶ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ದೇಹದ ಉಷ್ಣತೆ ಕಾಪಾಡಲು ಬೇಕಾಗುವ ಅಂಶಗಳ ಕೊರತೆಯಾಗುತ್ತದೆ.
ಅದರಲ್ಲೂ ನೀವು ಚಳಿಗಾಲದಲ್ಲಿ ಆಗಾಗ ಶೀತಕ್ಕೆ ಒಳಗಾಗುವುದು, ಸಣ್ಣದಾಗಿ ಜ್ವರ, ನೆಗಡಿ ಆಗುವ ಲಕ್ಷಣಗಳು ಇದ್ದರೆ ಈ ವಿಟಮಿನ್‌ಗಳ ಕೊರತೆ ಕೂಡ ಇದಕ್ಕೆ ಕಾರಣವಾಗಬಹುದು. ಹೀಗಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಹಸಿರು ತರಕಾರಿ, ಹಣ್ಣು ಸೇವನೆ ಮಾಡಬೇಕಾಗುತ್ತದೆ.