ಮುಳ್ಳೇರಿಯ: ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಜರುಗಿತು. ದೈವಸ್ಥಾನ ಮೊಕ್ತೆಸರ ಕೆ.ಜಿ ಶ್ಯಾನ್‍ಭಾಗ್ ಅಧ್ಯಕ್ಷತೆ ವಹಿಸಿದ್ದರು.
ಕಾನತ್ತೂರು ದಏವಸ್ಥಾನ ಟ್ರಸ್ಟಿ ಕೆ.ಪಿ ಜಯರಾಜ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ.ಗಟ್ಟಿ, ಎನ್ ಸತೀಶ್, ಸುರೇಶ್ ಮಣಿಯಾಣಿ, ನವೀಕರಣ ಸಮಿತಿ ಅಧ್ಯಕ್ಷ ನಾರಾಯಣ ಬೋವಿಕ್ಕಾನ, ಸೇವಾ ಸಮಿತಿ, ನವೀಕರಣ ಸಮಿತಿ ಪದಾಧಿಕಾರಿಗಳಾದ ಉದಯಕುಮಾರ್ ಮನ್ನಿಪಾಡಿ, ಲತಾ ನಂದಗೋಪಾಲ, ನಾಗೇಶ್ ಗಟ್ಟಿ, ಕೃಷ್ಣ ಕಲೈಪಾಡಿ, ಶಂಕರ ಕಲೈಪಾಡಿ, ಕೃಪ ಕೆ.ಜಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಗಟ್ಟಿ ಸ್ವಾಗತಿಸಿದರು. ಓಮನ ರವಿ ವಂದಿಸಿದರು.