HEALTH TIPS

ಬಾಂಗ್ಲಾ: 'ಜುಲೈ ದಂಗೆ ಘೋಷಣೆ' ಪ್ರಕಟಿಸಲಿರುವ ಮಧ್ಯಂತರ ಸರ್ಕಾರ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು 'ಜುಲೈ ದಂಗೆ ಘೋಷಣೆ' ಸಿದ್ಧಪಡಿಸುವುದಾಗಿ ಹೇಳಿದೆ.

ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಳ್ಳಲು ಜುಲೈನಲ್ಲಿ ಕಂಡುಬಂದಿದ್ದ 'ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ' ಕಾರಣವಾಗಿತ್ತು. ಇಂಥದೇ ಘೋಷಣೆಯೊಂದನ್ನು ಪ್ರಕಟಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವವಿದೆ ಎನ್ನಲಾಗಿತ್ತು.

ಇಂಥ ಘೋಷಣೆಗಳಿಂದ ಅಂತರ ಕಾಯ್ದುಕೊಂಡಿದ್ದ ಸರ್ಕಾರ, ಈಗ 'ಜುಲೈ ದಂಗೆ ಘೋಷಣೆ'ಯಂತಹದೇ ಘೋಷಣೆಯೊಂದನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದೆ.

ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್‌ ಯೂನುಸ್‌ ಅವರ ಸಲಹೆಗಾರ ಶಫೀಕ್‌ ಉಲ್ ಆಲಂ ಅವರು ಸೋಮವಾರ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

'ಉದ್ದೇಶಿತ ಘೋಷಣೆಯನ್ನು ದೇಶದ ಜನರ ಮುಂದಿಡಲಾಗುವುದು. ಒಮ್ಮತ ಮೂಡಿದ ಬಳಿಕ, ಘೋಷಣೆ ಕುರಿತು ಕೆಲವೇ ದಿನಗಳಲ್ಲಿ ನಿರ್ಧಾರ ಹೊರಬೀಳುವ ವಿಶ್ವಾಸ ಇದೆ' ಎಂದು ಅಲಂ ಹೇಳಿದ್ದಾರೆ.

'ಈ ಕುರಿತು ವ್ಯಾಪಕ ಸಮಾಲೋಚನೆ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು, 'ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ' ಪ್ರತಿನಿಧಿಗಳು ಸೇರಿದಂತೆ ಎಲ್ಲ ಭಾಗೀದಾರರ ಅಭಿಪ್ರಾಯಗಳ ಆಧರಿಸಿ ಈ ಘೋಷಣೆ ಸಿದ್ಧಪಡಿಸಲಾಗುವುದು' ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ, ದಿಢೀರ್‌ ಬೆಳವಣಿಗೆಯೊಂದರಲ್ಲಿ, 'ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ' ಹಾಗೂ 'ನ್ಯಾಷನಲ್ ಸಿಟಿಜೆನ್ಸ್ ಕಮಿಟಿ' ಸಂಘಟನೆಗಳು ಢಾಕಾದ ಸೆಂಟ್ರಲ್ ಶಹೀದ್‌ ಮಿನಾರ್‌ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ 'ಜುಲೈ ದಂಗೆ ಘೋಷಣೆ' ಪ್ರಕಟಿಸುವುದಾಗಿ ಹೇಳಿದ್ದವು.

ಸೋಮವಾರ ತಡರಾತ್ರಿ ತುರ್ತು ಸಭೆ ಕರೆದಿದ್ದ ಈ ಎರಡು ಸಂಘಟನೆಗಳು, 'ಜುಲೈ ದಂಗೆ ಘೋಷಣೆ' ಪ್ರಕಟಿಸುವ ಬದಲಿಗೆ ಅದೇ ಸ್ಥಳದಲ್ಲಿ 'ಏಕತೆಗಾಗಿ ನಡಿಗೆ' ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries