ಕಾಸರಗೋಡು: ರಾಷ್ಟ್ರೀಯ ನಾಗರಿಕ ಸೇವಾ ಕೂಟದಲ್ಲಿ ಭಾಗವಹಿಸುವ ರಾಜ್ಯ ತಂಡವನ್ನು ಆಯ್ಕೆ ಮಾಡುವ ರಾಜ್ಯ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಕಾಸರಗೋಡು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
14 ಜಿಲ್ಲೆಗಳ ಕಬಡ್ಡಿ ತಂಡಗಳಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿದ್ದವು. ಕೆ. ವಸಂತಿ (ಜಿಎಚ್‍ಎಸ್‍ಎಸ್ ಕುಂಡಂಕುಳಿ), ಪಿ.ಪಿ.ರಂಜಿನಿ (ಜಿವಿಎಚ್‍ಎಸ್‍ಎಸ್ ಫಾರ್ ಗಲ್ರ್ಸ್ ಕಾಸರಗೋಡು), ಕೆ.ಎನ್. ಶ್ರೀವಿದ್ಯಾ (ಜಿಎಚ್‍ಎಸ್‍ಎಸ್ ಮುಳ್ಳೇರಿಯ), ಶೀಜಾ ಕೆ (ಜಿ.ಎಚ್‍ಎಸ್‍ಎಸ್ ಬಂದಡ್ಕ), ಪಿ.ಜಿಶಾ ಬ್ರಿಜಿತ್ (ಜಿಲ್ಲಾ ನ್ಯಾಯಾಲಯ), ಪಿ.ಪಿ.ತಂಗಮಣಿ (ಜಿ.ಎಸ್.ಬಿ.ಎಸ್. ಕುಂಬಳೆ), ಪಿ. ಜಿಶಾ (ಉಪ ನ್ಯಾಯಾಲಯ ಹೊಸದುರ್ಗ), ಕೆ.ವಿ.ಬೀನಾ (ಜಿಲ್ಲಾ ನ್ಯಾಯಾಲಯ), ಕೆ. ಕವಿತಾ (ಸಿಎ ಟು ಎಡಿಎಂ ಕಾಸರಗೋಡು) ಮತ್ತು ಶ್ರೀಜಾ ಕುಯ್ಯನಂಗಾಡನ್ (ಜಿಎಚ್‍ಎಸ್‍ಎಸ್ ಪಾಕ್ಕಂ) ತಂಡದಲ್ಲಿದ್ದರು. ವಿಜೇತರಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಟ್ರೋಫಿ ವಿತರಿಸಿದರು.
ಕಾಸರಗೋಡು ಉದಯಗಿರಿ ಜಿಲ್ಲಾ ಸ್ಪೋಟ್ರ್ಸ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲೆಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರಹಿಮಾನ್, ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಸುರೇಂದ್ರನ್, ಉಪಾಧ್ಯಕ್ಷ ಅಶೋಕನ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.