ಕಾಸರಗೋಡು: ನಗರಸಭೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರು, ಕಾರ್ಮಿಕರು, ನೌಕರರು ಭಾಗವಹಿಸುವ ಮೂಲಕ ಶುಚಿತ್ವ ದಿನವನ್ನು ಆಚರಿಸಲಾಯಿತು. ಕಸಮುಕ್ತ ನವ ಕೇರಳ ಯೋಜನೆಯನ್ವಯ ಮೆಗಾ ಶುಚೀಕರಣ ಕಾರ್ಯ ನಡೆಸಲಾಯಿತು. ಹಸಿರು ಕೇರಳ ಮಿಷನ್ ನಿರ್ದೇಶದನ್ವಯ ಸಾವಯವ ತ್ಯಾಜ್ಯ, ಪ್ಲಾಸ್ಟಿಕ್, ಕಬ್ಬಿಣ, ಕಾಗದ, ದ್ರವ, ತೈಲ ತ್ಯಾಜ್ಯವನ್ನೂ ಬೇರ್ಪಡಿಸಿ ಸಂಗ್ರಹಿಸಲಾಯಿತು. ಶುಚಿತ್ವ ಸುಂದರ ಬಸ್ಸುಗಳು-ಶುಚಿತ್ವ ಬಸ್ ನಿಲ್ದಾಣವನ್ನು ಸುಸ್ಥಿರವಾಗಿ ಉಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಕೈಗೊಳ್ಳಲಾಯಿತು.
ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಶುಚಿತ್ವ ಅಭಿಯಾಣ ಉದ್ಘಾಟಿಸಿದರು. ಆಡಳಿತಾಧಿಕಾರಿ ಕೆ.ಟಿ.ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಎ.ವಿ.ಅಶೋಕ, ಎಮರ್ಸನ್ ಎ ಮೊದಲಾದವರು ಉಪಸ್ಥಿತರಿದ್ದರು. ಮೋಹನನ್ ಸ್ವಾಗತಿಸಿದರು. ಸಿ.ಬಾಲಕೃಷ್ಣನ್ ವಂದಿಸಿದರು.