ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಕೆ.ಶ್ಯಾಮರಾಜ್ ಹಾಗೂ ಉಪಾಧ್ಯಕ್ಷರಾಗಿ ಹರಿಣಿ ನಾಯ್ಕ್‍ರನ್ನು ಆಯ್ಕೆಮಾಡಲಾಯಿತು. 13 ಮಂದಿಯ ಸದಸ್ಯರು ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳ ವಿರುದ್ಧ ಒಬ್ಬರು ಸ್ಪರ್ಧಿಸಿದ್ದರು.
ಈ ಹಿನ್ನೆಲೆಯಲ್ಲಿ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳಾದ ಏಳು ಮಂದಿ ಚುನಾಯಿತರಾಗಿದ್ದಾರೆ. ಎಂ.ಆನಂದ, ಎಚ್ ಹರೀಶ, ಪಿ.ಮಹೇಶ, ಎಸ್.ನಟೇಶ್ ಕುಮಾರ್, ಎನ್.ಕೆ.ನಾರಾಯಣ, ಡಿ.ಕೆ.ಶ್ಯಾಮರಾಜ್, ಕೆ.ವಿನೋದ್, ಕೆ.ಬಿಜು, ಶ್ರೀಕೃಷ್ಣಪ್ರಸಾದ್, ಅವಿನಾಶ್, ಎಸ್.ಡಿ.ಉಷಾ ಎಂಬಿವರು ಗೆಲುವು ಸಾಸಿದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದಾರೆ.