ಕಾಸರಗೋಡು: ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸಂಬರ್ 16 ರಿಂದ 19 ರ ತನಕ ಜರಗುವ ಕೋಟಿ ಪಂಚಾಕ್ಷರಿ ಜಪಯಜ್ಞದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿಗಳವರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.
ಕೋಟಿಪಂಚಾಕ್ಷರಿ ಜಪ ಯಜ್ಞ ಸಮಿತಿಯ ಪದಧಿಕಾರಿಗಳು ಒಡಿಯೂರು ಕ್ಷೇತ್ರಕ್ಕೆ ತೆರಳಿ ಆಮಂತ್ರಣಪತ್ರ ನೀಡಿದರು. ಕಾರ್ಯಾಧ್ಯಕ್ಷರುಗಳಾದ ಡಾ.ಕೆ ಎನ್ ವೆಂಕಟ್ರಮಣ ಹೊಳ್ಳ, ರಾಮ್ ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಸದಸ್ಯ ಗಂಗಾಧರ ಉಪಸ್ಥಿತರಿದ್ದರು.