ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಭಾನುವಾರ ಏಕಾಹ ಭಜನೆ ನಡೆಯಿತು. ಸೂರ್ಯೋದಯ ಕಾಲದಲ್ಲಿ ಧಾರ್ಮಿಕ ಮುಂದಾಳು ಹರೀಶ್ ಭಟ್ ಚೇರ್ಕೂಡ್ಲು ದೀಪೋಜ್ವಲನೆಗೈದು ಚಾಲನೆಯನ್ನು ನೀಡಿದರು. ವಿವಿಧ ಭಜನಾ ಸಂಘಗಳು ತಂಡ ತಂಡವಾಗಿ ಭಜನಾಸೇವೆಗೈದರು. ಸೂರ್ಯಾಸ್ತದ ಕಾಲದಲ್ಲಿ ಮಹಾಪೂಜೆ ನಡೆಯಿತು. ವೀರಾಸ್ ಅಗಲ್ಪಾಡಿ ತಂಡದವರಿಂದ ಬೆಡಿ ಪ್ರದರ್ಶನ ವಿಶೇಷ ಆಕರ್ಷಣೆಯನ್ನು ಪಡೆಯಿತು. ಊರಪರವೂರ ಭಗವದ್ಭಕ್ತರು ಮಧ್ಯಾಹ್ನ ಹಾಗೂ ರಾತ್ರಿ ಶ್ರೀದೇವರ ಭೋಜನಪ್ರಸಾದ ಸ್ವೀಕರಿಸಿದರು.