ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಸಮಾರಂಭಗಳೊಂದಿಗೆ ಪ್ರಥಮ ದಿನ ಸಂಪನ್ನವಾಯಿತು.
ಪ್ರಥಮ ದಿನ ಅಭಿಷೇಕ ಪೂಜೆ, ಉಷಃಪೂಜೆ, ಗಣಹೋಮ, ಕಲಶಪೂಜೆ, ಶ್ರೀ ದೇವರಿಗೆ ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ಜರಗಿದವು.
ಬೆಳಗ್ಗೆ ವಿಧಾತ್ರಿ ಭಟ್ ಅಬ್ರಾಜೆ ಬಳಗದವರಿಂದ ಸಂಗೀತಾರ್ಚನೆ ಜರಗಿತು. ಸಹಕಲಾವಿದರಾಗಿ ಪಿಟೀಲಿನಲ್ಲಿ ಪ್ರಭಾಕರ ಕುಂಜಾರು, ಮೃದಂಗಮ್ ನಲ್ಲಿ ಶ್ರೀಧರ ಭಟ್ ಬಡಕ್ಕೇಕರೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಅಡ್ಕ ವಂದಿಸಿದರು. ಯನ್. ಸೀತಾರಾಮ ಬಳ್ಳುಳ್ಳಾಯ ನಿರ್ವಹಿಸಿದರು.