ಕಾಸರಗೋಡು: ಕೆಎಸ್‍ಇಬಿ ಲಿಮಿಟೆಡ್ ಸಬ್‍ಸ್ಟೇಷನ್‍ನಿಂದ ವಿದ್ಯಾನಗರ ಸಬ್‍ಸ್ಟೇಷನ್ ವರೆಗಿನ 110 ಕೆವಿ ಲೈನ್‍ನ ಸಾಮಥ್ರ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೈಲಾಟ್ಟಿಯಿಂದ ಕುಳಿಕುನ್ನು ವರೆಗೆ ಹೊಸದಾಗಿ ನಿರ್ಮಿಸಲಾದ ಎಂಸಿಎಂವಿ ಟವರ್‍ಗಳ ಮೂಲಕ ಡಿಸೆಂಬರ್ 7 ರಿಂದ ಮುಂದಿನ ಯಾವುದೇ ದಿವಸಗಳಲ್ಲಿ ವಿದ್ಯುತ್ ಪ್ರವಹಿಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಟವರ್ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಅಲ್ಲದೆ ಟವರ್ ಅಥವಾ ಲೈನ್‍ನಲ್ಲಿ ಅಸಹಜತೆ ಕಂಡು ಬಂದಲ್ಲಿ 9496011381 ಸಂಖ್ಯೆಗೆ ಮಾಹಿತಿ ನೀಡಬೇಕು ಎಂದು ಮೈಲಾಟ್ಟಿ ಉಪವಿಭಾಗದ ಲೈನ್ ನಿರ್ವಹಣಾ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.