ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರಿಬೈಲು ಕಂಬಳ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ಬುಧÀವಾರ ನಡೆಯಿತು. ಕ್ಷೇತ್ರದ ತಂತ್ರಿವರ್ಯ ರಾಮಮೋಹನ ಅರಿನಾಯರು ಕಂಬಳಕೆ ಚಾಲನೆ ನೀಡಿದರು.
ಹಗ್ಗವಿಭಾಗದಲ್ಲಿ ಪಾವೂರು ನೆಕ್ಕಳ ವಿಜಯಾ ಮೋನಪ್ಪ ಪೂಜಾರಿಯವರ ಕೋಣಗಳು ಪ್ರಥಮ, ನೇಗಿಲು ವಿಭಾಗದಲ್ಲಿ ಮುಳ್ಳೇರಿಯ ಎಡಪಾಡಿ ಚಂದ್ರಹಾಸ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದವು. ನೇಗಿಲು ವಿಭಾಗದಲ್ಲಿ ತಲಪಾಡಿ ಪಂಜಾಳ ಕೀರ್ತನ್ ರವೀಂದ್ರ ಪಕಳ, ಅಡಕಳಕಟ್ಟೆ ಚಂದ್ರಹಾಸ ಕುಲಾಲ್, ವರ್ಕಾಡಿ ತೋಕೆ ಹರೀಶ್ ಯುವಭಾವರು, ಪಾವೂರು ಕುಧುಕೊರಿ ಮಾಧವ ಕಿಂಞಣ್ಣ ಪೂಜಾರಿ, ನಚ್ಚೆ ಕೊಡಂಗೆ ಜಗದೀಶ್ ಶೆಟ್ಟಿ, ಮಜಿಭೈಲು ಆಲಿ, ಪೊಯ್ಯತ್ತಬೈಲು ಪಾಲೇಂಗ್ರಿ ಉಮ್ಮರ್, ಮುಳ್ಳೇರಿಯ ಕಾಲ್ರ್ಲೆ ಕಟ್ಟದಮನೆ ಬಾಲಕೃಷ್ಣ ಶೆಟ್ಟಿ, ಹಗ್ಗವಿಭಾಗದಲ್ಲಿ ದೇಲಂಪಾಡಿ ಮಯ್ಯಳ ಉಮೇಶ್ ಸುವರ್ಣ, ಪಜಿಂಗಾರು ಅಶೋಕ್, ಪಜಿಂಗಾರ್ ಉದಯ ಕುಮಾರ್, ಕಲ್ಲಾಜೆ ಜಗನ್ನಾಥ ಶೆಟ್ಟಿ, ಪಾವೂರು ನೆಕ್ಕಳ ನಮ್ಮ ಜವನೆರ್, ಪಾವೂರು ಕೊಪ್ಪಳ ಮೋನಿಚ್ಚ ಬ್ಯಾರಿ ತಂಡ ಸಹಿತ ಒಟ್ಟು 16 ಜೊತೆ ಕೋಣಗಳು ಭಾಗವಹಿಸಿದ್ದವು. ಗೋಪಾಲ ಶೆಟ್ಟಿ ಅರಿಬೈಲ್ ನೆತ್ಯ ಕಂಬಳ ನಿರ್ವಹಣೆ ಮಾಡಿದರು. ತೀರ್ಪುಗಾರರಾಗಿ ಕಕ್ಯಪದವು ಗೋಪಾಲ ಶೆಟ್ಟಿ, ಪಕೀರ ಮೂಲ್ಯ ಕಟ್ಟೆಮನೆ ಮತ್ತು ರಾಮ ಮೂಲ್ಯ ಸಹಕರಿಸಿದರು. ಸಾವಿರಾರು ಭಕ್ತರು ನಾಗಬ್ರಹ್ಮೆರ್ ದೇವಸ್ಥಾನಕ್ಕೆ ಭೇಟಿ ನೀಡಿ ಕಂಬಳ ಮತ್ತು ಪೂಕರೆ ಸ್ಥಾಪನೆ ಮಾಡಿದ್ದನು ವೀಕ್ಷಿಸಿ ಪುನೀತರಾದರು.ರಾತ್ರಿ ಉತ್ಸವ ನಡೆಯಿತು.