ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಬೇಕೂರು ಶಾಂತಿಗುರಿ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಸಮೀರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಏಳು ಪವನು ಚಿನ್ನಾಭರಣ ಕಳವುಗೈದಿದ್ದಾರೆ. ಸಮೀರ್ ಕುಟುಂಬ ಹಾಗೂ ಇತರರು ಒಟ್ಟಗಿ ಊಟಿ ಸಏರಿದಂತೆ ವಿವಿಧೆಡೆ ಪ್ರವಾಸ ತೆರಳಿದ್ದು, ಸೋಮವಾರ ಮನೆಗೆ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಎದುರಿನ ಬಾಗಿಲು ಒಡೆಯಲು ಯತ್ನಿಸಿ ವಿಫಲರಾದಾಗ ಹಿಂಭಾಗಿಲು ಒಡೆದು ನುಗ್ಗಿ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿನ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ದೋಚಿದ್ದಾರೆ. ಕಪಾಟಿನಲ್ಲಿದ್ದ ಇತರ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಲಾಗಿದೆ. ಕುಂಬಳೆ ಠಾಣೆ ಎಸ್.ಐ ರಾಜೀವನ್ ನೇತೃತ್ವದ ಪೊಲೀಸರ ತಂಡ, ಬೆರಳಚ್ಚು, ಶ್ವಾನದಳ ಕಳವುಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ.