ಕಾಸರಗೋಡು :ವಾಮನ್ ರಾವ್ ಬೇಕಲ್ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೈಂಕರ್ಯಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ಹಾಗೂ ಅನುಕರಣೀಯ. 2001ರಲ್ಲಿ ತನ್ನ ಮಾತಾಪಿತರ ನಾಮದೇಯದಲ್ಲಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಕಾಸರಗೋಡು, ಸುಮಾರು 20000ಪುಸ್ತಕಗಳಿರುವ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಅವರ ನೇತೃತ್ವದಲ್ಲಿ ನಡೆಯುವ ಸಂಸ್ಥೆಗಳು. ಕಾಸರಗೋಡು ಜಿಲ್ಲೆಗೆ ಆಗಮಿಸುವ ಹೊರನಾಡಿನ ಕನ್ನಡ ಸಾಹಿತಿಗಳು, ಸಾಂಸ್ಕೃತಿಕ ಯಾತ್ರಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಒದಗಿಸುತ್ತಿದೆ.
ಕಳೆದ ಎರಡು ಧಶಕಗಳ ದೀರ್ಘಕಾಲ ಇಷ್ಟು ಕನ್ನಡ ಪರಸೇವೆ, ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಯಾವುದೇ ಸಂಘ, ಸಂಸ್ಥೆ, ಸರಕಾರದಿಂದ ಅನುದಾನ ಪಡೆಯದೆ, ಸ್ವಂತ ಆದಾಯದ ಒಂದಂಶವನ್ನು ಪತ್ನಿ ಸಂಧ್ಯಾರಾಣಿ ಟೀಚರ್, ಪುತ್ರರಾದ ಸನತ್ ಕುಮಾರ್, ಕಾರ್ತಿಕ್ ಕಾಸರಗೋಡು, ಸಹಕಾರದಲ್ಲಿ ನೆರವೇರಿಸಿಕೊಂಡು ಬರುತ್ತಿರುವುದು ಉಲ್ಲೇಖನೀಯ.
ಈ ಜನಪರ, ಅಪೂರ್ವ ಸಾಧನೆಯನ್ನು ಗಮನಿಸಿ ಎμÁ್ಯ ಇಂಟನ್ರ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ, ಫೆÇೀರ್ ಚುನ್ ಐ ಟಿ ಸಿ ಹೊಸೂರು, ತಮಿಳುನಾಡು, ಹೊಸೂರಿನಲ್ಲಿ ನಡೆದ ಬ್ರಿಹತ್ ಕಾರ್ಯಕ್ರಮದಲ್ಲಿ "ಸೋಶಿಯಲ್ ಸರ್ವಿಸಸ್ "ವಿಭಾಗದಲ್ಲಿ ವಾಮನ್ ರಾವ್ ಬೇಕಲ್ ಇವರೀಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.. ಕನ್ನಡ ಭವನದ ಅಪಾರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ ಅಭಿನಂದಿಸುತ್ತಿದ್ದಾರೆ.