ಕಾಸರಗೋಡು : ಕನ್ನಡ ಭವನದ ರಜತ ಸಂಭ್ರಮ-2025ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡ ಪರ ಕಾರ್ಯಕ್ರಮ ಹಾಗೂ "ಮನೆಗೊಂದು ಗ್ರಂಥಾಲಯ -ಪುಸ್ತಕ ಸತ್ಯ -ಪುಸ್ತಕ ನಿತ್ಯ, ಜನಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿ ರಚಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲಾಸಮಿತಿ ಅದ್ಯಕ್ಷರಾಗಿ ನಿವೃತ್ತ ಪ್ರಧ್ಯಾಪಕ ಡಾ ಕೆ. ಜಿ. ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಸರಗೋಡು ಕನ್ನಡ ಭವನದ ನಿರ್ದೇಶಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅವರು ಡಾ ಕೆ. ಜಿ. ವೆಂಕಟೇಶ್ ಹೆಸರು ನಾಮನಿರ್ದೇಶನ ಮಾಡಿದ್ದಾರೆ. ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕøತಿಕ ರಾಯಭಾರಿಗಳಿಗೆ. ಕನ್ನಡ ಭವನದ "ರಜತ ಸಂಭ್ರಮ-2025'ರ ಕಾರ್ಯಕ್ರಮ ಸಂಘಟನೆ ಸಂಯೋಜನೆಯ ಜವಾಬ್ದಾರಿ ವಹಿಸಿಕೊಡಲಾಗಿದೆ.