HEALTH TIPS

ಚಿಣ್ಣರ ಚಿಲುಮೆ ವತಿಯಿಂದ ಪ್ರತಿಭಾ ಪುರಸ್ಕಾರ-ಸ್ವಾಗತ ಸಮಿತಿ ರೂಪೀಕರಣ.

ಮಂಜೇಶ್ವರ: ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ ತಿಂಗಳ 29ನೇ ತಾರೀಕಿಗೆ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಾಕುಡ ಸಮುದಾಯದ  ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರಗಲಿದೆ. ಈ ಬಗ್ಗೆ ಭಾನುವಾರ ಹೊಸಂಗಡಿ ಫ್ಲೆಕ್ಸ್ ಪಾಯಿಂಟ್ ಹಾಲ್ ನಲ್ಲಿ ಸ್ವಾಗತ ಸಮಿತಿ ಸಭೆಯು ಜರಗಿತು.


ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಅಧ್ಯಕ್ಷ  ವಿಜಯ ಪಂಡಿತ್ ಉದ್ಘಾಟಿಸಿ ಮಾತನಾಡಿ, ಚಿಣ್ಣರ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಇನ್ನಷ್ಟ್ಟು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಲಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು ಐತಿಹಾಸಿಕ ಕಾರ್ಯಕ್ರಮಕ್ಕೆ ಮುನ್ನುಡಿ ಇಡೋಣ ಎಂದು ಕರೆ ನೀಡಿದರು. 


ಸಭೆಯಲ್ಲಿ ಮಧೂರು ಗ್ರಾಮ ಪಂಚಾಯತಿ ಸದಸ್ಯ ಉದಯ್ ಬೆದ್ರಢ್ಕ, ಯುವ ಮುಂದಾಳು ವಿಠಲ್ ನಾರಾಯಣ ಬ0ಬ್ರಾಣ, ಹರೀಶ್ ಮಾಸ್ತರ್ ಹೊಸಂಗಡಿ ಮೊದಲಾದವರು  ಮಾತನಾಡಿದರು. ರಾಜೇಶ್ ಮಾಸ್ತರ್ ಕೊಡ್ಲಮೊಗರು, ಪವನ್ ಹೊಸಂಗಡಿ, ಸುಮಂಗಲ ಪೊಸೋಟ್, ತುಳಸಿ ದಾಸ್ ಮಂಜೇಶ್ವರ, ಮಂಜುನಾಥ್ ಕೊಡ್ಲಮೊಗರು,ಉದಯ ಸೊಂಕಾಲ್, ಪ್ರಿಜ್ಜು ಬಳ್ಳಾರ್, ಪ್ರವೀಣ್ ಸೊಂಕಾಲ್, ತಾರಾನಾಥ್ ತಚ್ಚನಿ, ರಾಜೇಶ್ ಮಾಸ್ತರ್ ಮಂಜೇಶ್ವರ, ಚಂದ್ರಹಾಸ ಕತ್ತರಿಕೋಡಿ, ಬೇಬಿ ತಚ್ಚನಿ, ರಘು ರಾಮ್ ಛತ್ರ0ಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗಾಗಿ ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು. ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನಿರ್ದೇಶಕ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿರಂಜನ್ ಮಾಸ್ತರ್ ಕುಂಜತ್ತೂರು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries