ಬದಿಯಡ್ಕ: ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ-ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಕನ್ನಡ ಕಂಠಪಾಠ ಹಾಗೂ ವಯಲಿನ್ ಪೌರಸ್ತ್ಯ ಗಳಲ್ಲಿ ಅನ್ವಿತಾ ತಲ್ಪಣಾಜೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈಕೆ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ. ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಅನೀಶ್ ವಿ ಭಟ್ ಹಾಗೂ ವಯಲಿನ್ ವಿದ್ವಾನ್ ಪ್ರಭಾಕರ ಕುಂಜಾರು ಇವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ತಲ್ಪನಾಜೆ ಶಿವಶಂಕರ ಭಟ್ ಹಾಗೂ ಸುಧಾವಾಣಿ ದಂಪತಿ ಪುತ್ರಿ.