ಮುಳ್ಳೇರಿಯ : ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ವಿವಾಹಿತಳಾಗಿದ್ದು, ಈ ಬಗ್ಗೆ ಯುವಕ ಪೊಲೀಸ್ ಠಾಣೆಗೆ ಕರೆಮಾಡಿ ಮಾಹಿತಿ ನೀಡಿದ್ದಾನೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಬೀಜಂತಡ್ಕ ನಿವಾಸಿ ಹಾಗೂ ಪೆರ್ಲದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಶ್ರೀದೇವಿ ಪರಾರಿಯಾಗಿ ಮದುವೆಯಾದವಳು.
ಪೆರ್ಲ ಸನಿಹದ ಅಡ್ಕ ನಿವಾಸಿ, ಆಟೋ ಚಾಲಕ ಕೀರ್ತನ್ ಜತೆ ಶ್ರೀದೇವಿ ಸುಳ್ಯದ ದೇಗುಲವೊಂದರಲ್ಲಿ ವಿವಾಹಿತಳಾಗಿದ್ದಾಳೆ. ಪುತ್ರಿ ಶ್ರೀದೇವಿ ಬುಧವಾರದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ತಂದೆ ರಾಧಾಕೃಷ್ಣ ನಾಯ್ಕ್ ಪೊಲೀಸರಿಗೆ ದೂರು ನೀಡಿದ್ದರು. ಹುಟುಕಾಟದ ಮಧ್ಯೆ ಕೀರ್ತನ್ ಆದೂರು ಠಾಣೆಗೆ ಕರೆಮಾಡಿ ಶ್ರೀದೇವಿ ತನ್ನ ಜತೆಗಿದ್ದು, ನಾವಿಬ್ಬರೂ ದೇವಾಲಯದಲ್ಲಿ ವಿವಾಹಿತರಗಿರುವುದಾಗಿ ಮಾಹಿತಿ ನೀಡಿದ್ದನು.