HEALTH TIPS

ಮಕ್ಕಳಲ್ಲಿ ಶ್ರವಣ ದೋಷದ ಲಕ್ಷಣವೇನು? ತಜ್ಞರು ಈ ಬಗ್ಗೆ ಹೇಳೋದೇನು?

 ಮಕ್ಕಳಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಸಮಸ್ಯೆಗಳಲ್ಲಿ ಶ್ರವಣ ಸಮಸ್ಯೆಗಳು ಕೂಡ ಒಂದಾಗಿದೆ. ಚಿಕ್ಕ ಮಕ್ಕಳಲ್ಲಿ ಶ್ರವಣ ದೋಷ ಇದ್ದರೆ ಅದನ್ನು ತಿಳಿಯುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಏಕೆಂದರೆ ಮಕ್ಕಳಲ್ಲಿ ಶ್ರವಣ ಸಮಸ್ಯೆ ಇದೆಯೇ ಎಂಬುದು ಆರಂಭದಲ್ಲಿ ತಿಳಿಯುವುದಿಲ್ಲ. ಆದ್ರೆ ಹುಟ್ಟಿದಾಗ ಮಕ್ಕಳಿಗೆ ಶ್ರವಣ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳ ನಡೆಸಲಾಗುತ್ತದೆ.

ಹಾಗಾದ್ರೆ ಮಕ್ಕಳಲ್ಲಿ ನೀವು ಶ್ರವಣ ಪರೀಕ್ಷೆ ಯಾವಾಗ ಮಾಡಬೇಕು.? ಶ್ರವಣ ಪರೀಕ್ಷೆ ಮಾಡುವುದರಿಂದಾಗುವ ಲಾಭವೇನು? ಎಲ್ಲಿ ಪರೀಕ್ಷೆ ಮಾಡಿಸಬೇಕು ಎಂಬ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ. ಈ ಕುರಿತಂತೆ ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಪ್ಯಾಥೊಲಾಜಿಸ್ಟ್‌ ಆಗಿರುವ ಅರುಣ್ ಎನ್.ಆರ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ನವಜಾತ ಶಿಶುವಲ್ಲಿ ಶ್ರವಣ ಪರೀಕ್ಷೆ ಮಾಡುವುದರಿಂದ ಮಗುವು ಶಾಶ್ವತವಾಗಿ ಶ್ರವಣ ದೋಷವನ್ನು ಹೊಂದಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿದು ಪೋಷಕರು ವೈದ್ಯಕೀಯ ಸಲಹೆಗಳ ಪಡೆದು ಮಗುವನ್ನು ಶ್ರವಣದೋಷ ಮುಕ್ತರನ್ನಾಗಿಸಲು ಸಹಕರಿಸುತ್ತದೆ ಎಂದು ಅವರು ಹೇಳುತ್ತಾರೆ.


ನವಜಾತ ಶಿಶುಗಳಲ್ಲಿ ಶ್ರವಣ ದೋಷ ಪರೀಕ್ಷೆ ಯಾವಾಗ ಮಾಡಿಸಬೇಕು?

ನಿಮ್ಮ ಮಗು ಜನಿಸಿದ ನಂತರ ಆಸ್ಪತ್ರೆಯಿಂದ ಮರಳಿ ಮನೆಗೆ ಹೋಗುವುದರ ಒಳಗಾಗಿ ಮಾಡಿಸತಕ್ಕದ್ದು, ಅಥವಾ ಜನ್ಮ ನೀಡಿದ ಒಂದು ವಾರದ ಒಳಗೆ ಮಾಡಿಸಲು ಸಾಧ್ಯವಾಗದೇ ಇದ್ದಲ್ಲಿ ಮಗು ಹುಟ್ಟಿ ಮೊದಲ ತಿಂಗಳ ಒಳಗೆ ಮಾಡಿಸಿ ಶ್ರವಣ ದೋಷ ಮುಕ್ತರನ್ನಾಗಿಸಿ. ಜೊತೆಗೆ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಮುಂಜಾಗೃತ ಕ್ರಮ ತೆಗೆದುಕೊಂಡರೆ ಮಗುವಿನ ಶ್ರವಣ ದೋಷವನ್ನು ತಡೆಯಬಹುದು.

ಮಗುವಿಗೆ / ನವಜಾತ ಶಿಶುವಿಗೆ ಶ್ರವಣ ದೋಷ ಪರೀಕ್ಷೆ ಮಾಡಿಸುವುದರಿಂದಾಗುವ ಪ್ರಯೋಜನವೇನು?

ಪಂಚೇಂದ್ರಿಯಗಳಲ್ಲಿ ಒಂದಾದ ಶ್ರವಣ (ಕಿವಿ) ಮಗುವಿನ ಭವಿಷ್ಯಕ್ಕೆ ಬಹಳ ಮುಖ್ಯ. ಶ್ರವಣ ಪರೀಕ್ಷೆಯನ್ನು ಮಾಡಿಸಿ ದೋಷವಿದ್ದಲ್ಲಿ ಮಂಜಾಗೃತಾ ಕ್ರಮವನ್ನು ವಹಿಸುವುದು ಉತ್ತಮ.

ಶ್ರವಣ ದೋಷದ ಕೆಲವು ಲಕ್ಷಣಗಳೇನು?

  • ಬೇರೆಯವರ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿರುವುದು
  • ಮಗುವಿನ ಮಾತು ಮತ್ತು ಭಾವನೆ ವ್ಯಕ್ತಪಡಿಸುವುದು ವಿಳಂಬವಾಗುತ್ತದೆ
  • ಮಗುವಿನ ಮುಂದಿನ ಏಳಿಗೆ ಮತ್ತು ಕಲಿಕೆಗೆ ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ
  • ಮಗುವಿಗೆ ತಮ್ಮ ಮೇಲೆ ಮೂಡುವಂತಹ ಋಣಾತ್ಮಕ ಭಾವನೆ ಮಗುವಿನ ಭವಿಷ್ಯವನ್ನು ಕೆಡಿಸುತ್ತದೆ
  • ಬೇರೆಯವರನ್ನು ಸಹಪಾಠಿಗಳನ್ನಾಗಿ-ಸ್ನೇಹಿತರನ್ನಾಗಿ ಸ್ವೀಕರಿಸಲು ತೊಂದರೆಯಾಗುತ್ತದೆ
  • ಕುಟುಂಬದ ಸವಾಲುಗಳನ್ನು ಎದುರಿಸಲು ಕಷ್ಟವಾಗುತ್ತದೆ

ನವಜಾತ ಶಿಶುಗಳಲ್ಲಿ ಶ್ರವಣ ಪರೀಕ್ಷೆ ಏಕೆ ಮಾಡಿಸಬೇಕು?

ಸರಿ ಸುಮಾರು ಒಂದು ಸಾವಿರ ಮಕ್ಕಳಲ್ಲಿ ಮೂರರಿಂದ ಆರು ಮಕ್ಕಳಿಗೆ ಶಾಶ್ವತ ಶ್ರವಣ ದೋಷ ಸಮಸ್ಯೆ ಹೊಂದಿರುತ್ತಾರೆ. ಮಗುವಿನಲ್ಲಿ ಶ್ರವಣ ದೋಷ ಕಂಡುಬಂದರೆ ಅದಕ್ಕೆ ಅನುವಂಶೀಯತೆ ಎನ್ನುವುದು ಶೇ.95ರಷ್ಟು ಕಾರಣವಾಗಿರುವುದಿಲ್ಲ. ಉದಾಹರಣೆಗೆ ತಂದೆ ತಾಯಿಯಲ್ಲಿ ಶ್ರವಣ ದೋಷವಿದ್ದಾಗ ಮಗುವು ಶ್ರವಣ ದೋಷ ಇಲ್ಲದೆ ಜನಿಸಿರುವ ಉದಾಹರಣೆಗಳಿವೆ.

ಹಾಗೆ ತಂದೆ ತಾಯಿಗೆ ಶ್ರವಣ ದೋಷ ಇಲ್ಲದೆ ಇದ್ದಾಗ ಮಕ್ಕಳಲ್ಲಿ ಈ ದೋಷ ಎದುರಾಗುವ ಸಮಸ್ಯೆಗಳಿರಬಹುದು. ಶ್ರವಣ ದೋಷವು ವೈದ್ಯಕೀಯ ಪರೀಕ್ಷೆ ಹೊರತುಪಡಿಸಿ ಮೇಲ್ನೋಟಕ್ಕೆ ಕಾಣುವಂತದಲ್ಲ.

ನವಜಾತ ಶಿಶುವಿನಲ್ಲಿ ಶ್ರವಣ ದೋಷವೆಂಬುದು ಯಾವುದೇ ಲಕ್ಷಣಗಳಿಂದ ಗೋಚರವಾಗುವುದಿಲ್ಲ.

ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ?

  • ಶ್ರವಣ ಪರೀಕ್ಷೆಯು ವೇಗವಾದ ಮತ್ತು ಸುರಕ್ಷತೆಯ ಪರೀಕ್ಷೆಯಾಗಿದೆ.
  • ನವಜಾತ ಶಿಶುವಿನಲ್ಲಿ ಶ್ರವಣ ಪರೀಕ್ಷೆಯು ಒಂದು ತಪ್ಪಿದಲ್ಲಿ ಎರಡನೇ ಬಾರಿಗೆ ಮಾಡುವ ಅವಶ್ಯಕತೆ ಇರುತ್ತದೆ
  • ಶ್ರವಣ ಪರೀಕ್ಷೆಯನ್ನು ಕೇವಲ 10 ನಿಮಿಷದಲ್ಲಿ ಮಾಡಲಾಗುತ್ತದೆ.
  • ಶ್ರವನ ಪರೀಕ್ಷೆ ಮಾಡುವಾಗ ನಿಮ್ಮ ಮಗು ಮತ್ತು ಸುತ್ತಮುತ್ತಲಿನ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ.
  • ಈ ಪರೀಕ್ಷೆಯನ್ನು ಮಾಡುವಾಗ ನಿಮ್ಮ ಮಗು ಕಡ್ಡಾಯವಾಗಿ ಮಲಗಿರಬೇಕಾಗುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries