ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಲಿರುವ ಶ್ರೀ ಶಿವಶಕ್ತಿ ಮಹಾಯಾಗದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸಮೀಪದ ಚಂದ್ರಂಪಾರೆಯಿಂದ ಆರಂಭವಾದ ಮೆರವಣಿಗೆಯಲ್ಲಿ ತಾಯಂದಿರು, ಮಕ್ಕಳೂ ಪಾಲ್ಗೊಂಡಿದ್ದರು.
ಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಪ್ರಧಾನ ಸಂಚಾಲಕ ಪಿ.ಆರ್.ಸುನೀಲ್, ಪುರುಷೋತ್ತಮ ಪುಣಿಂಚಿತ್ತಾಯ ನೀರ್ಮಜೆ, ಸೀತಾರಾಮರಾವ್ ಪಿಲಿಕೂಡ್ಲು, ರವಿಶಂಕರ್ ಪುಣಿಂಚಿತ್ತಾಯ, ಕುಶಾಲ್ ಯಾದವ್, ರಾಮಚಂದ್ರ, ಸೀತಾರತ್ನ, ಜಯರಾಂ ಕೋಟೂರು, ಸಂತೋಷ್ ಚಂದ್ರಂಪಾರ, ಉಣ್ಣಿಕೃಷ್ಣನ್, ರವಿ ಚಂದ್ರಂಪಾರೆ, ಶಶಿಧರನ್ ನಾಯರ್, ಟಿ.ಕೆ.ಮಾಧವನ್, ಕೃಷ್ಣೋಜಿ ಮಾಸ್ತರ್, ಸಿ.ಕೃಷ್ಣನ್ ಚಾತ್ತಪಾಡಿ, ಸುಜಾತಾ ಶಶಿಧರನ್, ನಾರಾಯಣ ಅರ್ಲಡ್ಕ, ಶಾಂತಾ ನಾರಾಯಣನ್, ದಿನೇಶ್ ಚಾಂಡಿಮೂಲೆ, ಭಾಸ್ಕರ ಜಾತಿಕಾಡ್ ಮೊದಲಾದವರು ನೇತೃತ್ವ ವಹಿಸಿದ್ದರು.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಸಂಜೆ 6 ಗಂಟೆಗೆ ಅರಣಿಮಥನದ ಮೂಲಕ ಹೋಮಾಗ್ನಿ ಪ್ರತಿಷ್ಠಾಪನೆ ನಡೆಯಲಿದೆ. ಸ್ಥಳೀಯ ಮಕ್ಕಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 29ರಂದು ಬೆಳಗ್ಗೆ ಗಣಪತಿ ಹೊಮದೊಂದಿಗೆ ಶಿವಶಕ್ತಿ ಮಹಾಯಾಗ ಆರಂಭವಾಗಲಿದೆ. ಬೆಳಗ್ಗೆ 10 ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಮಧುಸೂದನ ಅಯರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕನ್ಯಾನ ಸದಾಶಿವ ಶೆಟ್ಟಿ ಕುಳೂರು, ಕೆ.ಕೆ.ಶೆಟ್ಟಿ ಹಾಗೂ ನಾಡಿನ ಹೆಸರಾಂತ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಕ್ಕೆ ಪೂರ್ಣಾಹುತಿ ಮತ್ತು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.