ಡೊನಾಲ್ಡ್ ಟ್ರಂಪ್ & ಗ್ರೀನ್‌ಲ್ಯಾಂಡ್ ನಡುವೆ ಮಾತಿನ ಮಹಾಯುದ್ಧ ಮುಂದುವರಿದಿದ್ದು, ಟ್ರಂಪ್ ಅವರು ನೀಡಿರುವ ಹೇಳಿಕೆ ಯುರೋಪ್ ಖಂಡದಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಪ್ರದೇಶವನ್ನು ಖರೀದಿ ಮಾಡುವ ಮಾತು ಆಡಿ ದೊಡ್ಡ ಹಲ್‌ಚಲ್ ಎಬ್ಬಿಸಿದ್ದಾರೆ.
ಮತ್ತೊಂದು ಕಡೆ ಗ್ರೀನ್‌ಲ್ಯಾಂಡ್ ಮೇಲೆ ಸಂಪೂರ್ಣವಾದ ಹಿಡಿತ ಹೊಂದಿರುವ ಡೆನ್ಮಾರ್ಕ್ ಏನು ಮಾಡಿದೆ ಗೊತ್ತಾ?
ಗ್ರೀನ್‌ಲ್ಯಾಂಡ್ ಎಂಬ ಬೃಹತ್ ದ್ವೀಪರಾಷ್ಟ್ರದ ಮೇಲೆ ಅಮೆರಿಕದ ಕಣ್ಣು ಬಿದ್ದಿದೆ. ಅದ್ರಲ್ಲೂ ಈ ವಿಚಾರದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚರ್ಚೆಯಂತೂ, ಬಾರಿ ದೊಡ್ಡ ಪ್ರಮಾಣದಲ್ಲಿ ಗಮನ ಸೆಳೆಯುತ್ತಿದೆ. ಯಾಕಂದ್ರೆ ಗ್ರೀನ್‌ಲ್ಯಾಂಡ್ ಖರೀದಿಸಿ, ದ್ವೀಪರಾಷ್ಟ್ರದ ಮೇಲೆ ಹಿಡಿತ ಹೊಂದಲು ಇದೀಗ ಡೊನಾಲ್ಡ್ ಟ್ರಂಪ್ ಪ್ರಯತ್ನ ಮಾಡ್ತಾ ಇದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗಲೇ, ಡೆನ್ಮಾರ್ಕ್ ಕೊತ.. ಕೊತ.. ಕುದಿಯುತ್ತಿದ್ದು ನೇರವಾಗಿ ಗ್ರೀನ್‌ಲ್ಯಾಂಡ್ ಭದ್ರತೆ ಹೆಚ್ಚಿಸಿ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದೆ.
ವಿವಾದಗಳ ಮೂಟೆಗೆ ಕೊನೆ ಯಾವಾಗ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ ಸಿಕ್ಕಾಪಟ್ಟೆ ಕಿರಿಕ್ ಜೋರಾಗಿದೆ. ಒಂದಾದ ನಂತರ ಒಂದು ಕಿರಿಕ್ ಈಗ ವಿವಾದದ ಕಿಡಿ ಹೊತ್ತಿಸಿದೆ. ಪನಾಮ ಕಾಲುವೆ ವಿಚಾರದಲ್ಲಿ ಕಿರಿಕ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಪನಾಮ ದೇಶದ ಕಾಲುವೆ ಅಧಿಕಾರ ಅಮೆರಿಕಗೆ ವಹಿಸಿಕೊಡಿ ಎಂದಿದ್ದರು. ಆ ನಂತರ, ಗ್ರೀನ್‌ಲ್ಯಾಂಡ್ ವಿಚಾರ ಕೂಡ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್ ದೇಶವನ್ನೇ ಖರೀದಿ ಮಾಡುವ ಮಾತು ಆಡಿದ್ದರು.
13 ಸಾವಿರ ಕೋಟಿ ರೂಪಾಯಿ ಖರ್ಚು!
ಈ ಮೂಲಕ ಮತ್ತೆ ಅಮೆರಿಕದ ನೂತನ ಅಧ್ಯಕ್ಷರ ಮಾತುಗಳು ತಲ್ಲಣ ಸೃಷ್ಟಿಸಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಆದರೆ, ಹೀಗೆ ಟ್ರಂಪ್ ಅವರ ಹೇಳಿಕೆಯನ್ನ ಡೆನ್ಮಾರ್ಕ್ ಗಂಭೀರವಾಗಿ ಪರಿಗಣಿಸಿದ್ದು ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಇದೀಗ ಗ್ರೀನ್‌ಲ್ಯಾಂಡ್ ದೇಶದ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಹಾಗೇ ಗ್ರೀನ್‌ಲ್ಯಾಂಡ್‌ಗೆ ವಿಶೇಷ ಪಡೆಯ ಸೈನಿಕರ ನಿಯೋಜನೆಗೆ ಕೂಡ ಚಿಂತನೆ ನಡೆಸಿದೆ ಡೆನ್ಮಾರ್ಕ್.
ಒಟ್ನಲ್ಲಿ ಸುಮ್ಮನೆ ಇರದೆ ಡೊನಾಲ್ಡ್ ಟ್ರಂಪ್ ಅವರು ಕಿರಿಕ್ ಮಾಡಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಇದೀಗ ಮೂಡಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆಗಳ ಗಮನಿಸಿದರೆ, ಮುಂದಿನ ದಿನಗಳಲ್ಲಿ ಅಮೆರಿಕ & ಇತರ ದೇಶಗಳ ನಡುವಿನ ಸಂಬಂಧದ ಮೇಲೆ ಕೂಡ ಟ್ರಂಪ್ ಅವರ ಈ ಹೇಳಿಕೆಗಳು ದೊಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಪನಾಮ ದೇಶದ ನಾಯಕರು ತಿರುಗೇಟು ನೀಡಿದ್ದಂತೆ, ಇದೀಗ ಡೆನ್ಮಾರ್ಕ್ ನಾಯಕರು ಕೂಡ ಟ್ರಂಪ್ ಅವರ ಮಾತಿನಿಂದ ರೊಚ್ಚಿಗೆದ್ದಿದ್ದಾರೆ!