ನೀವು ಹೋಟೆಲ್‌ಗೆ ಹೋಗಿ ಪೂರಿ ಆರ್ಡರ್ ಮಾಡಿದರೆ ಅವರ ತರುವ ಪೂರಿ ನೋಡಿಯೇ ಎಷ್ಟು ಚೆನ್ನಾಗಿ ಉಬ್ಬಿದಂತೆ ಇದೆ ಅಲ್ವಾ ನಾವು ಮಾಡಿದಾಗ ಏಕೆ ಹೀಗೆ ಬರುವುದಿಲ್ಲ ಎಂದನಿಸುತ್ತೆ ಅಲ್ವಾ? ನಂತರ ಅವರು ಪೂರಿ ಉಬ್ಬಿ ಬರಲು ಸೋಡಾ ಹಾಕಿರಬಹುದು ಎಂದುನಮಗೆ ನಾವೇ ಸಮಧಾನ ಮಾಡಿಕೊಳ್ಳುತ್ತೇವೆ.
ಪೂರಿ ಅಂದರೆ ಅದು ಉಬ್ಬಿದಂತಿರಬೇಕು, ಆದರೆ ಕೆಲವರು ಪೂರಿಯನ್ನು ಗಟ್ಟಿಯಾಗಿ ಮಾಡುತ್ತಾರೆ, ಅದು ಸರಿಯಾಗಿ ಉಬ್ಬಿ ಬರುವುದಿಲ್ಲ, ಅಂಥ ಪೂರಿ ತಿನ್ನಲು ಅಷ್ಟು ಟೇಸ್ಟ್ ಅಂತ ಅನಿಸಲ್ಲ, ಆದರೆ ಮೃದುವಾದ ಉಬ್ಬಿಕೊಂಡ ಪೂರಿ ಮುರಿದು ಬಾಯಿಗಿಡುವಾಗಲೇ ತುಂಬಾನೇ ಖುಷಿಯಾಗುವುದು. ನೀವು ಸೋಡಾ ಹಾಕದೆಯೇ ಉಬ್ಬಿದ ಪೂರಿ ಮಾಡಬಹುದು, ಅದಕ್ಕೆ ಕೆಲವೊಂದು ಟಿಪ್ಸ್ ಬಳಸಬೇಕಷ್ಟೇ.
ಪೂರಿಗೆ ಬೇಕಾಗುವ ಸಾಮಗ್ರಿ 1 ಕಪ್ ಗೋಧಿ ಹಿಟ್ಟು ಹಾಗೂ 2 ಚಮಚ ಸೂಜಿ ರವೆ ಎಣ್ಣೆ ರುಚಿಗೆ ತಕ್ಕ ಉಪ್ಪು ಕಲೆಸಲು ನೀರು ಪೂರಿ ಉಬ್ಬಿ ಬರಲು ಕೆಲ ಕಿಚನ್ ಟಿಪ್ಸ್ ಬೌಲ್‌ಗೆ 1 ಕಪ್ ಗೋಧಿ ಹಿಟ್ಟು, 3/4 ಚಮಚ ಸೂಜಿ ರವೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಕೈಯಿಂದಲೇ ಮಿಕ್ಸ್ ಮಾಡಬೇಕು. ಈಗ ಒಂದು ಚಮಚ ಎಣ್ಣೆ ಹಾಕಿ, ಮಿಕ್ಸ್ ಮಾಡಲು ಸಾಕಾಗುವಷ್ಟು ನೀರು ಹಾಕಿ ಮಿಕ್ಸ್ ಮಾಡಿ ಹಿಟ್ಟು ಇನ್ನೂ ಮೃದುವಾಗಲು ಮತ್ತೊಂದು ಚಮಚ ಎಣ್ಣೆ ಬೇಕಾದರೂ ಸೇರಿಸಬಹುದು. ಹಿಟ್ಟು ಅಂಟು- ಅಂಟಾಗಿ ಇರಬಾರದು, ಗಟ್ಟಿಯಾಗಿಯೂ ಇರಬಾರದು ನೀವು ಹಿಟ್ಟು ಕಲೆಸಿದ ಮೇಲೆ ಬಟ್ಟೆಯಿಂದ ಸುತ್ತಿ ಅರ್ಧ ಗಂಟೆ ಇಡಿ ನೀವು ಹಿಟ್ಟು ತುಂಬಾ ಹೊತ್ತು ಕೂಡ ಕಲೆಸಬಾರದು, ನಂತರ 1/4 ಚಮಚ ಎಣ್ಣೆ ಸೇರಿಸಿ, ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಸೇರಿಸಿ. ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ ನಂತರ ಹಿಟ್ಟು ತಟ್ಟುವಾಗ ಸ್ವಲ್ಪ ಗೋಧಿ ಹಿಟ್ಟು ಉದುರಿಸಿ ನಂತರ ತಟ್ಟಿ, ಪೂರಿ ಹಿಟ್ಟು ತಟ್ಟುವಾಗ ತುಂಬಾ ತೆಳುವಾಗಿ ತಟ್ಟಬೇಡಿ, ಅದರಂತೆ ತುಂಬಾ ದಪ್ಪವಾಗಿಯೂ ತಟ್ಟಬಾರದು, ಸ್ವಲ್ಪ ಮಂದವಾಗಿ ತಟ್ಟಿ. ಎಣ್ಣೆಯನ್ನು ಸಾಧಾರಣ ಉರಿಯಲ್ಲಿ ಕುದಿಸಿ, ಸ್ವಲ್ಪ ಹಿಟ್ಟು ಹಾಕಿ ಹಿಟ್ಟು ಉಬ್ಬಿ ಬರುತ್ತಿದೆಯೇ ಎಂದು ಪರಿಶೀಲಿಸಿ ನಂತರ ತಟ್ಟಿದ ಹಿಟ್ಟು ಹಾಕಿ. ಪೂರಿ ಎಣ್ಣೆಯಲ್ಲಿ ಸಂಪೂರ್ಣ ಮುಳುಗುವಂತಿರಬೇಕು ಪೂರಿ ಚೆನ್ನಾಗಿ ಉಬ್ಬಿ ಬರಲು ಸೌಟ್‌ನಿಂದ ಮೆಲ್ಲನೆ ಪ್ರೆಸ್ ಮಾಡಿ ಮಗುಚಿ ಹಾಕಿ, ಪೂರಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.
ಇತರ ಸಲಹೆ:
ನೀವು ಇದೇ ಟಿಪ್ಸ್ ಬಳಸಿ ದೊಡ್ಡ ಗಾತ್ರದ ಪೂರಿ ಕೂಡ ಮಾಡಬಹುದು, ಚಿಕ್ಕ ಗಾತ್ರದ ಪೂರಿ ಕೂಡ ಮಾಡಬಹುದು. ಪೂರಿ ಚೆನ್ನಾಗಿ ಉಬ್ಬಿಕೊಂಡು ಬಂದರೆ ಅದರೊಳಗಡೆ ಕೂಡ ಚೆನ್ನಾಗಿ ಬೇಯುತ್ತದೆ, ಇಲ್ಲದಿದ್ದರೆ ಒಳಗಡೆ ಅಷ್ಟು ಚೆನ್ನಾಗಿ ಬೇಯಲ್ಲ ನೀವು ಸೂಜಿ ರವೆ ಬಳಸದೆಯೂ ಇರಬಹುದು ಕೆಲವರು ಹಿಟ್ಟು ಕಲೆಸಲು ಬಿಸಿ ನೀರು ಹಾಕುತ್ತಾರೆ, ಯಾವುದೇ ನೀರಿನಲ್ಲಿ ಕಲೆಸಬಹುದು, ಆದರೆ ವಾತಾವರಣ ತುಂಬಾ ಚಳಿಯಿದ್ದರೆ ಬಿಸಿ ನೀರಿನಲ್ಲಿ ಕಲೆಸುವುದು ಒಳ್ಳೆಯದು. ಪೂರಿಗೆ ಬೇಗನೆ ಹೊಗೆ ಬರುವ ಎಣ್ಣೆ ಬಳಸಬೇಡಿ.