ಕಾಸರಗೋಡು: ಕನ್ನಡ ಶಾಲೆಗಳಲ್ಲಿನ ಎಲ್.ಪಿ.ಎಸ್ ಟಿ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಕೇಂದ್ರ ಸಮಿತಿಯು ಆಗ್ರಹಿಸಿದೆ. ಉಪಜಿಲ್ಲಾ ಮಟ್ಟ ಹಾಗೂ ಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳಲ್ಲಿ ಕನ್ನಡದ ಅವಗಣನೆಯನ್ನು ಖಂಡಿಸಲಾಯಿತು.ಕನ್ನಡ ದೈಹಿಕ ಶಿಕ್ಷಣ ಅಧ್ಯಾಪಕರ ನೇಮಕಾತಿಯನ್ನು ತ್ವರಿತ ಗೊಳಿಸಲು ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾ ಕಲೋತ್ಸವದಲ್ಲಿನ ಕನ್ನಡದ ಅವಗಣನೆಯನ್ನೂ ಖಂಡಿಸಲಾಯಿತು.
ನಿಯೋಗದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರತ್ ಕುಮಾರ್, ಅಧಿಕೃತ ವಕ್ತಾರರಾದ ಸುಕೇಶ, ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.