ಕಾಸರಗೋಡು: ಗಡಿನಾಡಿನ ತುಳು, ಕನ್ನಡ ರಂಗ ಭೂಮಿಗೆ ಮಹತ್ವದ ಕೊಡುಗೆ ನೀಡಿದ ರಂಗನಿರ್ದೇಶಕ, ನಟ, ನಾಟಕಕಾರ ಚಟ್ಲ ರಾಮಯ್ಯ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ರಾಮಯ್ಯ ಶೆಟ್ಟಿ ಅವರ ನಿವಾಸದಲ್ಲಿ ಜರುಗಿತು.
ಕಾಸರಗೋಡಿನ ಸಾಂಸ್ಕøತಿಕ, ಸಾಹಿತ್ಯಿಕ ಸಂಸ್ಥೆ ರಂಗ ಚಿನ್ನಾರಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಟ್ಲ ರಾಮಯ್ಯ ಶೆಟ್ಟಿ ಅವರು 1970-80ರ ದಶಕದಲ್ಲಿ ಕಾಸರಗೋಡಿನ ರಂಗ ಭೂಮಿಯಲ್ಲಿ ನಾಟಕ ಕಲಾವಿದನಾಗಿ, ನಿರ್ದೇಶಕನಾಗಿ, ನಾಟಕ ರಚನಾಕಾರನಾಗಿ ಖ್ಯಾತಿ ಗಳಿಸುವುದರ ಜತೆಗೆ ಸಾಮಾಝಿಕ, ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವುದಾಗಿ ರಂಗ ಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ. ರಾಮಯ್ಯ ಶೆಟ್ಟಿ ಅವರನ್ನು ಶಾಲು ಹೊದಿಸಿ, ಸ್ಮರಣಿಕ, ಫಲಪುಷ್ಪ ನೀಡಿ ಕಾಸರಗೋಡು ಚಿನ್ನಾ ಗೌರವಿಸಿದರು. ರಂಗಚಿನ್ನಾರಿ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ರಂಗ ನಟ ದೂಮಣ್ಣ ರೈ, ಮಹಾಬಲ ರೈ, ಲೋಕೇಶ್, ಸಂಜು ಕಾಸರಗೋಡು, ಕೆ. ಸತ್ಯನಾರಾಯಣ, ಸಂಕಪ್ಪ ರೈ, ವಿದ್ಯಾ, ಲೀಲಾವತೀ, ಅಮರನಾಥ ಶೆಟ್ಟಿ, ಸುಧಾಕರ ಭಂಡಾರಿ ಉಪಸ್ಥಿತರಿದ್ದರು.