ಕಾಸರಗೋಡು: ಪೊಯಿನಾಚಿ ಸನಿಹದ ಎರೋಲ್ ಶ್ರೀಹರಿ ಅಕ್ಷಯಶ್ರೀ ನೇತೃತ್ವದಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯ ನೋಂದಾವಣಾ ಶಿಬಿರ ಅಕ್ಷಯಶ್ರೀಯಲ್ಲಿ ಜರುಗಿತು.
ಅಕ್ಷಯಶ್ರೀ ಜಿಲ್ಲಾ ಉಪಾಧ್ಯಕ್ಷ ಪ್ರದೀಪ್. ಎಂ. ಕೂಟಕಣಿ ಶಿಬಿರ ಉದ್ಘಾಟಿಸಿದರು. ಅಕ್ಷಯಶ್ರೀ ಅಧ್ಯಕ್ಷ ಚಂದ್ರನ್ ವಡಕ್ಕೇಕರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ. ಕೃಷ್ಣದಾಸ್, ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಕೆ. ಬಾಲಕೃಷ್ಣನ್ ಉಪಸ್ಥಿತರಿದ್ದರು. ಅಕ್ಷಯಶ್ರೀ ಕಾರ್ಯದರ್ಶಿ ವೈ. ಸಂತೋಷ್ ಸ್ವಾಗತಿಸಿದರು. ಕೋಶಾಧಿಕಾರಿ ಅನಿಲ್‍ಕುಮಾರ್ ಮುಳಯಿಲ್ ವಂದಿಸಿದರು. ಹಲವರು ಶಿಬಿರದ ಪ್ರಯೋಜನ ಪಡೆದುಕೊಂಡರು.