ತಿರುವನಂತಪುರಂ: ಉಪಚುನಾವಣೆಯಲ್ಲಿ ಪಾಲಕ್ಕಾಡ್ ಮತ್ತು ಚೆಲಕ್ಕರ ಕ್ಷೇತ್ರಗಳಿಂದ ಗೆದ್ದ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಪಾಲಕ್ಕಾಡ್ ಶಾಸಕ ರಾಹುಲ್ ಮಂಗೂಟ್ ಮತ್ತು ಚೇಲಕ್ಕರ ಶಾಸಕ ಯು.ಆರ್. ಪ್ರದೀಪ್ ವಿಧಾನಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಎ.ಎನ್. ಶಂಸೀರ್ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಲಾಯಿತು.
ವಿಧಾನಸೌಧದ ಶಂಕರ ನಾರಾಯಣನ್ ತಂಬಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಯು.ಆರ್.ಪ್ರದೀಪ್ ಸ್ವಗೌರವ ಮತ್ತು ರಾಹುಲ್ ಮಂಗೂಟ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಶಾಸಕರನ್ನು ಸ್ಪೀಕರ್ ಎ.ಎನ್. ಶಂಸೀರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅಭಿನಂದಿಸಿದರು. ಪ್ರಮಾಣ ವಚನ ಸ್ವೀಕಾರಕ್ಕೆ ಪ್ರದೀಪ್ ಮತ್ತು ರಾಹುಲ್ ಜೊತೆಗೆ ಪಕ್ಷದ ಕಾರ್ಯಕರ್ತರು ಹಾಗೂ ಆಪ್ತರು ಆಗಮಿಸಿದ್ದರು.
ಸಚಿವರಾದ ಕೆ.ಕೃಷ್ಣನ್‍ಕುಟ್ಟಿ, ಪಿ.ಪ್ರಸಾದ್, ರಾಮಚಂದ್ರನ್ ಕಡನಪ್ಪಳ್ಳಿ, ಸಜಿ ಚೆರಿಯನ್, ಎ.ಕೆ.ಶಶೀಂದ್ರನ್, ಕೆ.ರಾಜನ್, ಗಣೇಶ್ ಕುಮಾರ್, ಮುಖ್ಯ ಸಚೇತಕ ಎನ್.ಜಯರಾಜ್ ಮತ್ತಿತರರು ಉಪಸ್ಥಿತರಿದ್ದರು.