ಕಾಸರಗೋಡು: ಜಾನುವಾರುಗಳಿಗೆ ವಿಮೆ ಮಾಡಲು ಸಾದ್ಯವಾಗದ ಹಿನ್ನೆಲೆಯಲ್ಲಿ ಜಾನುವಾರುಗಳು ಸಾವಿಗೀಡಾಗುವಾಗ ಪರಿಹಾರ ಮೊತ್ತ ಲಭ್ಯವಾಗದಿರುವ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯು ಹೈನುಗಾರರಿಗೆ ಎಂಟು ಕೋಟಿ ರೂಪಾಯಿಗಳ ವಿಮಾ ಸೌಲಭ್ಯವನ್ನು ಖಾತ್ರಿಪಡಿಸುವ ಯೋಜನೆಗೆ ಮುಂದಾಗಿದೆ ಎಂದು ಪಶು ಸಂಗೋಪನೆ ಮತ್ತು ಹೈನುಗಾರಿಕಾ ಅಭಿವೃದ್ಧಿ ಖಾತೆ ಸಚಿವೆ ಜೆ.ಚಿಂಚುರಾಣಿ ತಿಳಿಸಿದ್ದಾರೆ.
ಅವರು ಜಿಲ್ಲೆಯ ಕಾಳೀಚಾಮರಂ ಕ್ಷೀರೋತ್ಪಾದಕ ಸಂಘದ ವಠಾರದಲ್ಲಿ ಜಿಲ್ಲಾ ಮಟ್ಟದ ಡೇರಿ ಹೈನುಗಾರರ ಸಮಾವೇಶವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. ಕೇಂದ್ರದ ನೆರವಿನೊಂದಿಗೆ ಸಮಗ್ರ ವಿಮಾ ಯೋಜನೆಯ ಮೂಲಕ ಕೇರಳದ ಎಲ್ಲಾ ರೈತರ ಹಸುಗಳಿಗೆ ಮೂರು ವರ್ಷದೊಳಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಹೈನುಗಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ದೇಶೀಯ ಉತ್ಪಾದನೆ ಅಧಿಕವಾಗಿದೆ, ಆದರೆ ಒಟ್ಟು ಹಾಲು ಉತ್ಪಾದನೆಯ ಅರ್ಧದಷ್ಟು ಮಾತ್ರ ಡೇರಿ ಸೊಸೈಟಿಗಳಿಗೆ ತಲುಪುತ್ತದೆ ಎಂದು ಸಚಿವರು ಹೇಳಿದರು.
ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಹೈನುಗಾರಿಕಾ ಇಲಾಖೆ ನಿರ್ದೇಶಕಿ ಶಾಲಿನಿಗೋಪಿನಾಥ್ ಯೋಜನೆ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿ ಹೆಚ್ಚು ಹಣ ಮಂಜೂರು ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಶಾಸಕ ಎಂ.ರಾಜಗೋಪಾಲನ್ ಸ್ಮರಣಿಕೆ ನೀಡಿದರು. ಜಿಲ್ಲೆಯಲ್ಲಿ ಹೆಚ್ಚು ಹಣ ಮಂಜೂರು ಮಾಡಿದ ಗ್ರಾಮ ಪಂಚಾಯಿತಿಗೆ ಎಂ.ರಾಜಗೋಪಾಲನ್ ಶಾಸಕ ಸನ್ಮಾನಿಸಿದರು. ಜಿಲ್ಲೆಯಲ್ಲಿ ಹೆಚ್ಚು ಹಣ ಮಂಜೂರು ಮಾಡಿದ ಬ್ಲಾಕ್ ಪಂಚಾಯಿತಿ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಹಾಲು ಪೂರೈಸಿರುವ ರೈತರು ಹಾಗೂ ಎಸ್‍ಸಿ ಮತ್ತು ಎಸ್‍ಟಿ ಹೈನುಗಾರರನ್ನು ಸನ್ಮಾನಿಸಲಾಯಿತು.