ಮುಳ್ಳೇರಿಯ: ಚಿರತೆ ಸಂಚಾರದ ಬಗ್ಗೆ ಭೀತಿ ಎದುರಿಸುತ್ತಿರುವ ಮುಳ್ಳೇರಿಯ ಆಸುಪಾಸಿನ ಜನತೆಗೆ, ಅರ್ಧ ತಿಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮುಳ್ಳಹಂದಿಯ ಕಳೇಬರದಿಂದ ಮತ್ತಷ್ಟು ಆತಂಕ ಹೆಚ್ಚಾಗತೊಡಗಿದೆ.
ಮುಳ್ಳೇರಿಯ ಸನಿಹದ ಅಡ್ಕತ್ತೊಟ್ಟಿ ನಿವಾಸಿ ಶಶಿಧರನ್ ಎಂಬವರ ಮನೆ ಸನಿಹ ಚಿರತೆ ಮುಳ್ಳಹಂದಿಯನ್ನು ಬೇಟೆಯಾಡಿ ಅರ್ಧ ತಿಂದು ಹಾಕಿರುವ ಬಗ್ಗೆ ಸ್ಥಳೀಯರು ಆತಂಕ ವಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇಲ್ಲಿನ ನಿವಾಸಿಯೊಬ್ಬರ ಸಾಕು ನಾಯಿಯನ್ನೂ ಚಿರತೆ ಎಳೆದುಕೊಮಡು ಹೋಗಿರುವ ಘಟನೆ ಹಸಿರಾಗಿರುವ ಮಧ್ಯೆ, ಮುಳ್ಳಹಂದಿಯ ಕಳೇಬರ ಪತ್ತೆಯಾಗಿದೆ.
ಚಿರತೆ ಸೆರೆಹಿಡಿಯಲು ಅಡ್ಕತೊಟ್ಟಿಯಲ್ಲಿ ಗೂಡನ್ನು ಇಡಲಾಗಿದ್ದು, ಇಲ್ಲಿಂದ20 ಮೀಟರ್ ದೂರದಲ್ಲಿ ಮುಳ್ಳುಹಂದಿ ಹಂದಿಯ ಕಳೇಬರ ಪತ್ತೆಯಾಗಿದೆ. ಆದರೆ ಹುಲಿ ಗೂಡಿನ ಬಳಿ ಸುಳಿಯದಿರುವುದು ಸ್ಥಳೀಯ ಜನತೆಗೆ ಹಾಗೂ ವನಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಂದಿ ಕಳೇಬರ ಪತ್ತೆಯಾದ ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ತಪಾಸಣೆ ನಡೆಸಿದರು.